ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯತ್ವ: ಭಾರತದ ಉಮೇದುವಾರಿಕೆ ಘೋಷಿಸಿದ ಜೈಶಂಕರ್

Last Updated 16 ಡಿಸೆಂಬರ್ 2022, 5:32 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮರಳಲು ಎದುರು ನೋಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ಧಾರೆ. ಇದೇವೇಳೆ, 2028-29ರ ಅವಧಿಗೆ ಭದ್ರತಾ ಮಂಡಳಿಗೆ ತಾತ್ಕಾಲಿಕ ಸದಸ್ಯತ್ವಕ್ಕೆ ದೇಶದ ಉಮೇದುವಾರಿಕೆಯನ್ನು ಘೋಷಿಸಿದರು.

‘ನಾವು 2028-29ರ ನಮ್ಮ ಮುಂದಿನ ಅಧಿಕಾರಾವಧಿಗೆ ನಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದೇವೆ ಮತ್ತು ಭದ್ರತಾ ಮಂಡಳಿಗೆ ಹಿಂದಿರುಗಲು ನಾವು ಎದುರು ನೋಡುತ್ತಿದ್ದೇವೆ ಎಂದು ನಿಮಗೆ ತಿಳಿಸಲು ನನಗೆ ಸಂತೋಷವಾಗಿದೆ’ಎಂದು ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಯೋತ್ಪಾದನೆ ನಿಗ್ರಹ ಕುರಿತಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಡಿಸೆಂಬರ್ ಭಾರತದ ಪ್ರಸ್ತುತ ಭದ್ರತಾ ಮಂಡಳಿಯ ಸದಸ್ಯತ್ವದ ಕೊನೆಯ ತಿಂಗಳು, ಭಾರತವು ಎಂಟು ಬಾರಿ ವಿಶ್ವದ ಪ್ರಬಲ ಮಂಡಳಿಯಲ್ಲಿ ಸ್ಥಾನ ಪಡೆದಿದೆ ಎಂದು ಹೇಳಿದರು.

‘ನಮ್ಮ ಈ ಎಂಟನೇ ಅವಧಿಯಲ್ಲಿ ಸಮುದ್ರ ಭದ್ರತೆ, ವಿಶ್ವಸಂಸ್ಥೆಯ ಶಾಂತಿಪಾಲನೆಯಲ್ಲಿನ ತಂತ್ರಜ್ಞಾನ, ವಿಶ್ವಸಂಸ್ಥೆಯಲ್ಲಿನ ಸುಧಾರಣೆಗಳು ಮತ್ತು ಭಯೋತ್ಪಾದನೆ ನಿಗ್ರಹದಂತಹ ಸಮಕಾಲೀನ ಅನೇಕ ವಿಷಯಗಳನ್ನು ಕಾರ್ಯಸೂಚಿಯ ಮತ್ತು ವಿಶ್ವಸಂಸ್ಥೆಯಲ್ಲಿನ ಚರ್ಚೆಯ ಕೇಂದ್ರಕ್ಕೆ ತರಲು ನಾವು ಪ್ರಯತ್ನಿಸಿದ್ದೇವೆ’ಎಂದು ಅವರು ಹೇಳಿದರು.

'ನಾವು ಕಾಳಜಿಯ ಅನೇಕ ವಿಷಯಗಳ ಬಗ್ಗೆ ಜಗತ್ತಿನ ದಕ್ಷಿಣದ ಧ್ವನಿಯಾಗಲು ಪ್ರಯತ್ನಿಸಿದ್ದೇವೆ. ನಾವು ಅವರ ಆಸಕ್ತಿಗಳು ಮತ್ತು ಆತಂಕಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಿದ್ದೇವೆ. ಆದರೆ, ಸದ್ಯ ಮಂಡಳಿಯಲ್ಲಿ ನಾವು ಸೇತುವೆಯ ಪಾತ್ರವನ್ನು ವಹಿಸಬಹುದೇ ಎಂಬುದನ್ನು ನೋಡಲು ಪ್ರಯತ್ನಿಸಿದ್ದೇವೆ’ಎಂದು ಜೈಶಂಕರ್ ಹೇಳಿದರು.

ಮಾಸಿಕ ಬದಲಾವಣೆ ಆಧಾರದ ಮೇಲೆ ಡಿಸೆಂಬರ್ 1ರಂದು, ಭಾರತವು ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು.

ಮಂಡಳಿಯಲ್ಲಿ 2021-2022ರ ಅವಧಿಯ ಭಾರತದ ಎರಡು ವರ್ಷಗಳ ಸದಸ್ಯತ್ವವು ಡಿಸೆಂಬರ್ 31ರಂದು ಕೊನೆಗೊಳ್ಳುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT