ಮಂಗಳವಾರ, ಅಕ್ಟೋಬರ್ 26, 2021
23 °C

ನೊಬೆಲ್‌ ಪ್ರಶಸ್ತಿ 2021: ಮೂವರು ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅರ್ಥಶಾಸ್ತ್ರ ನೊಬೆಲ್‌ಗೆ ಆಯ್ಕೆಯಾಗಿರುವ ತಜ್ಞರು

ಸ್ಟಾಕ್‌ಹೋಮ್‌: 2021ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಮಂಗಳವಾರ ಘೋಷಣೆಯಾಗಿದೆ. ಡೇವಿಡ್‌ ಕಾರ್ಡ್‌ ಹಾಗೂ ಜೋಶುವಾ ಡಿ.ಅಂಗ್ರಿಸ್ಟ್‌ ಮತ್ತು ಗ್ವಿಡೊ ಡಬ್ಲ್ಯು ಇಂಬೆನ್ಸ್‌ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಕಾರ್ಮಿಕರ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಗಳಿಗೆ ಡೇವಿಡ್‌ ಕಾರ್ಡ್‌ ಅವರಿಗೆ ನೊಬೆಲ್‌ ಸಂದಿದೆ. ಪ್ರಶಸ್ತಿಯಲ್ಲಿ ಅರ್ಧ ಭಾಗ ಡೇವಿಡ್‌ ಅವರಿಗೆ ಹಾಗೂ ಉಳಿದಾರ್ಧ ಪ್ರಶಸ್ತಿ ಮೊತ್ತವು ಜೋಶುವಾ ಮತ್ತು  ಗ್ವಿಡೊ ಅವರಿಗೆ ಹಂಚಿಕೆಯಾಗಲಿದೆ.

* ಡೇವಿಡ್‌ ಕಾರ್ಡ್‌, ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ, ಅಮೆರಿಕ
* ಜೋಶುವಾ ಡಿ.ಅಂಗ್ರಿಸ್ಟ್‌, ಮಸಾಚುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಅಮೆರಿಕ
* ಗ್ವಿಡೊ ಡಬ್ಲ್ಯು ಇಂಬೆನ್ಸ್‌, ಸ್ಟ್ಯಾನ್‌ಫೋರ್ಡ್‌ ಯೂನಿವರ್ಸಿಟಿ, ಅಮೆರಿಕ

2019ರಲ್ಲಿ ಭಾರತ ಮೂಲದ ಅಭಿಜಿತ್‌ ಬ್ಯಾನರ್ಜಿ (58), ಅವರ ಹೆಂಡತಿ ಎಸ್ತರ್‌ ಡಫ್ಲೊ (46) ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು. 

ಇದನ್ನೂ ಓದಿ– ಭಾರತ ಮೂಲದ ಅಭಿಜಿತ್‌ಗೆ ನೊಬೆಲ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು