ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ವಿಸ್ಕಾನ್ಸಿನ್‌ ಮಾಲ್‌ನಲ್ಲಿ ಗುಂಡಿನ ದಾಳಿ, ಎಂಟು ಮಂದಿಗೆ ಗಾಯ

Last Updated 21 ನವೆಂಬರ್ 2020, 5:02 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ವಿಸ್ಕಾನ್ಸಿನ್‌ನ ಶಾಪಿಂಗ್ ಮಾಲ್ ಒಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿಸ್ಕಾನ್ಸಿನ್ ಮೇಫೇರ್ಶಾಪಿಂಗ್ ಮಾಲ್‌ನಲ್ಲಿ ದಾಳಿ ನಡೆದಿದ್ದು ಅಲ್ಲಿಗೆ ನಮ್ಮ ಅಧಿಕಾರಿಗಳು ತೆರಳಿದ್ದಾರೆ. ಸ್ಥಳೀಯ ಪೊಲೀಸರು ಅವರಿಗೆ ಸಹಕಾರ ನೀಡುತ್ತಿದ್ದಾರೆ’ ಎಂದು ಎಫ್‌ಬಿಐ ಮತ್ತು ಮಿಲ್ವಾಕೀ ಕೌಂಟಿ ಶೆರಿಫ್‌ ಕಚೇರಿ ಟ್ವೀಟ್ ಮಾಡಿದೆ.

ತುರ್ತು ಕಾರ್ಯ ಪಡೆ ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ದಾಳಿಕೋರ ಅಲ್ಲಿರಲಿಲ್ಲ ಎಂದು ವೌವಾಟೋಸಾ ಪೊಲೀಸರ ಪ್ರಕಟಣೆ ತಿಳಿಸಿದೆ.

‘ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವ ಪ್ರಮಾಣದಲ್ಲಿ ಗಾಯವಾಗಿದೆ ಎಂಬ ಬಗ್ಗೆ ತಕ್ಷಣಕ್ಕೆ ಮಾಹಿತಿ ದೊರೆತಿಲ್ಲ. ಆದರೆ, ಯಾರೂ ಕೂಡ ಮಾರಣಾಂತಿಕವಾಗಿ ಗಾಯಗೊಂಡಿಲ್ಲ ಎಂದು ವೌವಾಟೋಸಾ ಮೇಯರ್ ಡೆನ್ನಿಸ್ ಮೆಕ್‌ಬ್ರೈಡ್ ‘ಎಬಿಸಿ ನ್ಯೂಸ್‌’ಗೆ ತಿಳಿಸಿದ್ದಾರೆ.

ದಾಳಿಕೋರ ಬಿಳಿಯನಾಗಿದ್ದು 20ರಿಂದ 30 ವರ್ಷ ವಯಸ್ಸಿನ ವ್ಯಕ್ತಿ ಇರಬೇಕೆಂದು ಪೊಲೀಸರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT