ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಲ್ಲಿ ₹ 33 ಕೋಟಿ ಲಾಟರಿ ಗೆದ್ದ ಭಾರತೀಯ: ವಾಹನ ಚಾಲಕ ಈಗ ಕೋಟ್ಯಧಿಪತಿ

ಚಾಲಕನಾಗಿ ದುಡಿಯುತ್ತಿದ್ದವನಿಗೆ ಲಾಟರಿ ರೂಪದಲ್ಲಿ ಬಂದ ಅದೃಷ್ಟ
Last Updated 24 ಡಿಸೆಂಬರ್ 2022, 5:14 IST
ಅಕ್ಷರ ಗಾತ್ರ

ದುಬೈ: ಭಾರತೀಯ ಮೂಲದ ಡ್ರೈವರ್‌ ಒಬ್ಬರು ಇಲ್ಲಿನ ‘ಎಮಿರೇಟ್ಸ್‌ ಡ್ರಾ‘ ಲಾಟರಿಯಲ್ಲಿ ಬರೋಬ್ಬರಿ ₹ 33 ಕೋಟಿ ಗೆದ್ದಿದ್ದಾರೆ.

ಅಜಯ್‌ ಒಗುಲಾ ಎಂಬವರೇ ಇಷ್ಟು ಮೊತ್ತದ ಲಾಟರಿ ಗೆದ್ದ ಅದೃಷ್ಟವಂತ.

ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ದುಬೈಗೆ ತೆರಳಿದ್ದ ಅಜಯ್‌, ಸದ್ಯ ಜ್ಯುವೆಲರಿ ಅಂಗಡಿಯೊಂದರ ವಾಹನ ಚಾಲಕನಾಗಿ ದುಡಿಯುತ್ತಿದ್ದಾರೆ.

ಮಾಸಿಕ 3,200 ದಿರ್ಹಂ (ಸುಮಾರು ₹ 72,000) ಅವರ ವೇತನ. ಇದೀಗ ಅವರ ವೇತನಕ್ಕಿಂತ ಹಲವು ಪಟ್ಟು ಹಣ ಲಾಟರಿ ರೂಪದಲ್ಲಿ ಅವರನ್ನು ಹುಡುಕಿಕೊಂಡು ಬಂದಿದೆ.

ಹಣ ಗೆದ್ದಿರುವ ಖುಷಿಯನ್ನು ಖಲೀಜ್‌ ಟೈಮ್ಸ್‌ನೊಂದಿಗೆ ಹಂಚಿಕೊಂಡಿರುವ ಅಜಯ್‌, ‘ನಾನು ಲಾಟರಿ ಗೆದ್ದಿದ್ದೇನೆ ಎನ್ನುವುದನ್ನು ನಂಬಲಿಕ್ಕಾಗುತ್ತಿಲ್ಲ. ಮನೆವರೊಂದಿಗೆ ಈ ವಿಚಾರ ಹೇಳಿದಾಗಲೂ ಅವರು ನಂಬಲಿಲ್ಲ. ಈಗ ಮಾಧ್ಯಮಗಳಲ್ಲಿ ಬರುತ್ತಿದೆ, ಅವರು ನಂಬಲೇಬೇಕು‘ ಎಂದು ಹೇಳಿದ್ದಾರೆ.

ಅಲ್ಲದೇ ಈ ಹಣದಿಂದ ದತ್ತಿ ಸಂಸ್ಥೆ ಸ್ಥಾಪಿಸಿ, ತನ್ನ ಗ್ರಾಮದ ಹಾಗೂ ಪಕ್ಕದ ಗ್ರಾಮದ ಬಡವರಿಗೆ ನೆರವಾಗುತ್ತೇನೆ ಎಂದು ಹೇಳಿದ್ದಾರೆ.

ಇದೇ ಲಾಟರಿಯಲ್ಲಿ ಬ್ರಿಟಿಷ್ ಮೂಲದ ಪೌಲಾ ಲೀಚ್‌ ಎಂಬರು ಕೂಡ 77,777 ದಿರ್ಹಂ ( ಆಜಮಾಸು ₹ 17.5 ಲಕ್ಷ) ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT