ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್‌ ಟೇ–ವೊ ನಿಧನ

Last Updated 26 ಅಕ್ಟೋಬರ್ 2021, 8:14 IST
ಅಕ್ಷರ ಗಾತ್ರ

ಸೋಲ್‌: ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಟೇ-ವೂ (88) ನಿಧನರಾಗಿದ್ದಾರೆ ಎಂದು ಸೋಲ್‌ನ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆ ತಿಳಿಸಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು, ಮಂಗಳವಾರ ನಿಧನರಾದರು ಎಂದು ಆಸ್ಪತ್ರೆ ಹೇಳಿದೆ.

1979ರ ಮಿಲಿಟರಿ ದಂಗೆಯನ್ನು ಬೆಂಬಲಿಸಿದ್ದ ರೋಹ್‌, ಸೋಲ್‌ನಲ್ಲಿ ಸೇನಾ ವಿಭಾಗವನ್ನು ಮನ್ನಡೆಸಿದ್ದರು. ಅದು ಅವರ ಸೇನಾ ಸ್ನೇಹಿತ ಚುನ್‌ ಡೂ–ಹ್ವಾನ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತು. ಮಿಲಿಟರಿ ದಂಗೆ ಮತ್ತು 1980ರಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನಕಾರರ ಮೇಲಿನ ಮಿಲಿಟರಿ ದಮನವು ದಕ್ಷಿಣ ಕೊರಿಯಾದ ಆಧುನಿಕ ಇತಿಹಾಸದಲ್ಲಿ ಕರಾಳ ಅಧ್ಯಾಯಗಳಾಗಿವೆ.

1987ರಲ್ಲಿ ದಕ್ಷಿಣ ಕೊರಿಯಾದಲ್ಲಿ ಪ್ರಜಾಪ್ರಭುತ್ವ ಪರ ದೊಡ್ಡ ಪ್ರಮಾಣದಲ್ಲಿ ದಂಗೆಗಳು ನಡೆದವು. ಇದರ ಪರಿಣಾಮ ರೋಹ್‌ ಮತ್ತು ಚುನ್‌ ಅವರು ಅಧ್ಯಕ್ಷೀಯ ಹುದ್ದೆಗೆ ಚುನಾವಣೆ ಎದುರಿಸಬೇಕಾಯಿತು. 1987ರ ಚುನಾವಣೆಯಲ್ಲಿ ರೋಹ್‌ ಅಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ, ರೋಹ್‌ ಅವರು ಕಿಕ್‌ ಬ್ಯಾಕ್‌ ರೂಪದಲ್ಲಿ ಸಂಪತ್ತು ಸಂಗ್ರಹಿಸಿರುವುದಾಗಿ ತಪ್ಪೊಪ್ಪಿಕೊಂಡು ಜೈಲು ಸೇರಿದರು. ರಾಷ್ಟ್ರೀಯ ಸಾಮರಸ್ಯದ ಭಾಗವಾಗಿ ಅವರನ್ನು ಕ್ಷಮಿಸಲಾಯಿತು. ಬಳಿಕ ಅವರು ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT