ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನ ಮಿಲಿಟರಿ ಖಾತೆಗಳಿಗೆ ಫೇಸ್‌ಬುಕ್‌ ನಿರ್ಬಂಧ

Last Updated 25 ಫೆಬ್ರುವರಿ 2021, 6:07 IST
ಅಕ್ಷರ ಗಾತ್ರ

ಯಾಂಗೂನ್‌: ಮ್ಯಾನ್ಮಾರ್‌ ಮಿಲಿಟರಿಗೆ ಸಂಬಂಧಿಸಿದ ಎಲ್ಲಾ ಖಾತೆಗಳನ್ನು ಮತ್ತು ಮಿಲಿಟರಿ ನಿಯಂತ್ರಿತ ಕಂಪೆನಿಗಳ ಜಾಹೀರಾತುಗಳನ್ನು ನಿಷೇಧಿಸುವುದಾಗಿ ಫೇಸ್‌ಬುಕ್‌ ಗುರುವಾರ ‍ತಿಳಿಸಿದೆ.

ಫೆಬ್ರುವರಿ 1 ರಂದು ಸೇನೆಯು ಚುನಾಯಿತ ಸರ್ಕಾರದ ವಿರುದ್ಧ ದಂಗೆ ಎದ್ದು, ಅಧಿಕಾರವನ್ನು ವಶಕ್ಕೆ ಪಡೆಯಿತು.

‘ಮ್ಯಾನ್ಮಾರ್‌ನಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ‘ತುರ್ತುಪರಿಸ್ಥಿತಿ’ ಎಂದು ಪರಿಗಣಿಸಿ, ಸಂಸ್ಥೆಯು ಈ ಕ್ರಮವನ್ನು ಕೈಗೊಳ್ಳುತ್ತಿದೆ. ಮ್ಯಾನ್ಮಾರ್‌ನಲ್ಲಿ ಹಿಂಸಾಚಾರ ನಡೆದ ಸಂದರ್ಭದಲ್ಲೇ ಮಿಲಿಟರಿ ಆಧಾರಿತ ಖಾತೆಗಳ ಮೇಲೆ ನಿರ್ಬಂಧ ಹೇರುವುದಾಗಿ ನಿರ್ಧರಿಸಲಾಗಿತ್ತು’ ಎಂದು ಫೇಸ್‌ಬುಕ್‌ ಹೇಳಿಕೆ ಬಿಡುಗಡೆ ಮಾಡಿದೆ.

‘ದಂಗೆಯ ಆರಂಭದಲ್ಲೇ ಮಿಲಿಟರಿಗೆ ಸಂಬಂಧಿಸಿದ ಕೆಲ ಖಾತೆಗಳು ಮತ್ತು ಸೇನಾ ನಿಯಂತ್ರಿತ ಟಿವಿಯ ಪ್ರಸಾರವನ್ನು ನಿರ್ಬಂಧಿಸಿದ್ದೆವು’ ಎಂದು ಫೇಸ್‌ಬುಕ್‌ ಹೇಳಿದೆ.

ಫೇಸ್‌ಬುಕ್‌ ಮಾತ್ರವಲ್ಲದೇ ಇನ್‌ಸ್ಟಾಗ್ರಾಮ್‌ನಲ್ಲೂ ಈ ನಿರ್ಬಂಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT