ಬುಧವಾರ, ಡಿಸೆಂಬರ್ 1, 2021
22 °C

repeated ಆರು ಗಂಟೆಗಳ ನಂತರ ‘ಆನ್‌ಲೈನ್‌ಗೆ ಮರಳಿದ‘ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ತಾಂತ್ರಿಕ ಕಾರಣಗಳಿಂದಾಗಿ ಸೋಮವಾರ ಸಂಜೆ ದಿಢೀರನೆ ಕಾರ್ಯಾಚರಣೆ ಸ್ಥಗಿತಗೊಳಿಸಿ, ಜಗತ್ತಿನ ಕೋಟ್ಯಂತರ ಬಳಕೆದಾರರನ್ನು ಕಂಗಾಲಾಗಿಸಿದ್ದ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಮತ್ತು ಮೆಸೆಂಜರ್‌ ಸಾಮಾಜಿಕ ಮಾಧ್ಯಮಗಳು ಆರು ಗಂಟೆಗಳ ನಂತರ ಪುನಃ ಆನ್‌ಲೈನ್ ಕಾರ್ಯಾಚರಣೆಗೆ ಮರಳಿವೆ.

ಫೇಸ್‌ಬುಕ್ ಒಡೆತನದ ಈ ಎಲ್ಲ ಡಿಜಿಟಲ್‌ ವೇದಿಕೆಗಳು ಸೋಮವಾರ ಸಂಜೆ ಕ್ರ್ಯಾಷ್‌ ಆಗಿದ್ದವು.‌ ಜಗತ್ತಿನೆಲ್ಲೆಡೆ ಬಳಕೆದಾರರು ಇದರಿಂದ ತೊಂದರೆಗೆ ಒಳಗಾಗಿದ್ದರು.

‘ಅಪ್ಲಿಕೇಷನ್‌ಗಳಲ್ಲಿ ದೋಷಪೂರಿತ ಸಂರಚನಾ ಬದಲಾವಣೆಯಾಗಿದ್ದರಿಂದ ಏಕಾಏಕಿ ಅಪ್ಲಿಕೇಷನ್‌ ಕ್ರ್ಯಾಷ್ ಆಗಲು ಮೂಲ ಕಾರಣವಾಗಿದೆ. ಆದರೆ ಇದರಿಂದ ಬಳಕೆದಾರರ ಡೇಟಾಕ್ಕೆ ಧಕ್ಕೆಯಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ‘ ಎಂದು ಫೇಸ್‌ಬುಕ್‌ ತಿಳಿಸಿದೆ.

‘ನಮ್ಮ ಎಲ್ಲ ಸೇವೆಗಳು ಆನ್‌ಲೈನ್‌ಗೆ ಮರಳಿವೆ. ಇವುಗಳನ್ನು ಎಂದಿನಂತೆ ಕ್ರಿಯಾಶೀಲವಾಗಿ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆಗೆ ಹಿಂದಿರುಗಿಸಲು ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ‘ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

‘ವಿಶ್ವದಾದ್ಯಂತವಿರುವ ಬಹುದೊಡ್ಡ ಜನಸಮೂಹ ಮತ್ತು ಉದ್ಯಮಗಳು ನಮ್ಮ ಅಪ್ಲಿಕೇಷನ್‌ ಮೇಲೆ ಅವಲಂಬಿತ ವಾಗಿವೆ. ಇಂದು ನಮ್ಮ ಡಿಜಿಟಲ್ ವೇದಿಕೆಯಲ್ಲಾಗಿರುವ ಸಮಸ್ಯೆಯಿಂದ ನಿಮಗಾಗಿರುವ ತೊಂದರೆಗಾಗಿ ಕ್ಷಮೆ ಯಾಚಿ ಸುತ್ತೇವೆ. ನಮ್ಮ ಆ್ಯಪ್‌ಗಳು ಮತ್ತು ಸೇವೆಗಳನ್ನು ಮರಳಿ ತರಲು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ ಹಾಗೂ ಈಗ ಅವುಗಳ ಕಾರ್ಯಾಚರಣೆ ಆರಂಭವಾಗಿದೆ‘ ಎಂದು ಫೇಸ್‌ಬುಕ್ ತಿಳಿಸಿದೆ.

‘ತೊಂದರೆ ಅನುಭವಿಸಿದ ಎಲ್ಲರಿಗೂ ನಾವು ಕ್ಷಮೆಯಾಚಿಸುತ್ತೇವೆ. ಇಂದು ಉಂಟಾಗಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇವೆ. ನಮ್ಮ ಮೂಲಕ ಸೌರ್ಯವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಪ್ರಯತ್ನಿಸುತ್ತೇವೆ‘ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.