ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಉಪಚುನಾವಣೆ ಕಣದಲ್ಲಿ ಐವರು ಭಾರತ ಮೂಲದವರು

Last Updated 5 ನವೆಂಬರ್ 2022, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ನ.8ರಂದು ನಡೆಯಲಿರುವ ಮಧ್ಯಂತರ ಚುನಾವಣೆಯಲ್ಲಿ ಭಾರತ ಮೂಲದ ಅಮೆರಿಕದ ಐವರು ಪ್ರಭಾವಿ ರಾಜಕಾರಣಿಗಳು ಕಣದಲ್ಲಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಇವರ ಗೆಲುವು ಬಹುತೇಕ ಖಚಿತವಾಗಿದೆ.

ಹಾಲಿ ಸದಸ್ಯರೂ ಆಗಿರುವ ಡೆಮಾಕ್ರಟಿಕ್‌ ಪಾರ್ಟಿಯ ಅಮಿ ಬೆರಾ, ರಾಜಾ ಕೃಷ್ಣಮೂರ್ತಿ, ರೋ ಖನ್ನಾ ಮತ್ತು ಪ್ರಮೀಳಾ ಜಯಪಾಲ್‌ ಅವರು ಬಹುತೇಕ ಮರು ಆಯ್ಕೆಯಾಗುವುದು ನಿಶ್ಚಿತ ಎನ್ನಲಾಗಿದೆ.

ಅಲ್ಲದೆ, ಉದ್ಯಮಿ ಥಾಣೆದಾರ್ ಅವರೂ ಮಿಚಿಗನ್‌ನ 13ನೇ ಸಾಂಸ್ಥಿಕ ಜಿಲ್ಲೆಯಿಂದ ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಕ್ಯಾಲಿಫೋರ್ನಿಯಾದಿಂದ ಬೆರಾ, ಖನ್ನಾ ಹಾಗೂ ಇಲಿನಾಯಸ್‌ನಿಂದ ಕೃಷ್ಣಮೂರ್ತಿ ಮತ್ತು ವಾಷಿಂಗ್ಟನ್‌ನಿಂದ ಪ್ರಮೀಳಾ ಅವರು ಚುನಾವಣಾ ಕಣದಲ್ಲಿದ್ದಾರೆ.

ಪ್ರಸ್ತುತ, ಜನಪ್ರತಿನಿಧಿಗಳ ಸಭೆಯಲ್ಲಿ ಡೆಮಾಕ್ರಟಿಕ್‌ ಪಕ್ಷ ಪ್ರಾಬಲ್ಯ ಹೊಂದಿದೆ. ಉಪ ಚುನಾವಣೆಯ ಫಲಿತಾಂಶವು 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗಿದೆ. ಇದರ ಜೊತೆಗೆ, ದೇಶ ಸಾಗುತ್ತಿರುವ ದಿಕ್ಕು ಮತ್ತು ಅಧ್ಯಕ್ಷರ ಆಡಳಿತ ಶೈಲಿಯನ್ನು ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಲು ಮತದಾರರಿಗೆ ಇದು ವೇದಿಕೆಯಾಗಲಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT