ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಬಿರುಗಾಳಿ: 400ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

Last Updated 15 ಮಾರ್ಚ್ 2021, 5:49 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದ ಉತ್ತರ ಭಾಗ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿ ಮರಳು, ಧೂಳು ತುಂಬಿದ ಬಿರುಗಾಳಿ ಬೀಸುತ್ತಿದೆ. ಹತ್ತು ವರ್ಷಗಳಿಂದೀಚೆಗೆ ಈ ರೀತಿಯ ಬಿರುಗಾಳಿ ಎದ್ದಿರುವುದು ಇದೇ ಮೊದಲ ಬಾರಿ. ಇದರಿಂದಾಗಿ ನೂರಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ನಗರದ ಕೇಂದ್ರ ಭಾಗದಲ್ಲಿರುವ ಎತ್ತರವಾದ ಕಟ್ಟಡಗಳಲ್ಲಿ ಧೂಳು ಮತ್ತು ಮರಳು ತುಂಬಿದೆ. ಸಂಚಾರ ದಟ್ಟಣೆಯು ಉಂಟಾಗಿದೆ. ಹಾಗಾಗಿ ಬೀಜಿಂಗ್‌ನ ಪ್ರಮುಖ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನಕ್ಕೂ ಮುನ್ನ 400 ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು.

ಸಾಮಾನ್ಯವಾಗಿ ವಸಂತಕಾಲದಲ್ಲಿ ಪಶ್ಚಿಮ ಮರುಭೂಮಿಗಳಿಂದ ಮರಳು ಪೂರ್ವ ದಿಕ್ಕಿಗೆ ಬೀಸುತ್ತದೆ. ಈ ವೇಳೆ ಮರಳು ಬಿರುಗಾಳಿ ನಿಯಮಿತವಾಗಿ ಸಂಭವಿಸುತ್ತಿತ್ತು. ಇದು ಉತ್ತರ ಜಪಾನ್‌ನ ಪ್ರದೇಶದ ಮೇಲೂ ಪರಿಣಾಮ ಬೀರುತ್ತಿತ್ತು.

‘ಈ ಬಿರುಗಾಳಿಯುವಾಯುವ್ಯದಲ್ಲಿರುವ ಷಿನ್‌ಜಿಯಾಂಗ್‌ನಿಂದ ಈಶಾನ್ಯದ ಹೀಲಾಂಗ್ಜಿಯಾಂಗ್ ಮತ್ತು ಪೂರ್ವ ಕರಾವಳಿ ಬಂದರು ನಗರ ಟಿಯಾಂಜಿನ್‌ನ 12 ಪ್ರಾಂತ್ಯ ಮತ್ತು ಪ್ರದೇಶಗಳ ಮೇಲೆ ಪರಿಣಾಮ ಬೀರಲಿದೆ’ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT