ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ವಿದೇಶಿ ಪತ್ರಕರ್ತರಿಗೂ ನಿರ್ಬಂಧ ಇತ್ತು: ವರದಿ

Last Updated 1 ಮಾರ್ಚ್ 2023, 14:22 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದಲ್ಲಿಯ ವಿದೇಶಿ ಮಾಧ್ಯಮಗಳು 2022ರಲ್ಲಿ ಕಠಿಣ ಕೋವಿಡ್‌ ನಿರ್ಬಂಧಗಳು, ವ್ಯಾಪಕ ಪೀಡನೆ ಮತ್ತು ಸತತ ಕಣ್ಗಾವಲನ್ನು ಸಹಿಸಿವೆ ಎಂದು ಚೀನಾದಲ್ಲಿಯ ವಿದೇಶಿ ಪತ್ರಕರ್ತರ ಸಂಘ (ಎಫ್‌ಸಿಸಿಸಿ) ಎಂಬ ಮಾಧ್ಯಮ ಸಂಘಟನೆಯೊಂದು ವಾರ್ಷಿಕ ವರದಿಯಲ್ಲಿ ಬುಧವಾರ ಹೇಳಿದೆ.

ಚೀನಾ ವಿಧಿಸಿದ್ದ ಮಾನದಂಡ ಪ್ರಕಾರ ಪ್ರಮಾಣ ಪತ್ರ ಸಲ್ಲಿಸಿದ್ದರ ಹೊರತಾಗಿಯೂ ಅರ್ಧದಷ್ಟು ವಿದೇಶಿ ಪತ್ರಕರ್ತರಿಗೆ ಹಲವಾರು ಸ್ಥಳಗಳಲ್ಲಿ ಪ್ರವೇಶ ನೀಡಿರಲಿಲ್ಲ. ಸ್ಮಾರ್ಟ್‌ಫೋನ್‌ಗಳಲ್ಲಿ ಅಳವಡಿಸಲಾಗಿದ್ದ ಹೆಲ್ತ್‌ಕೋಡ್‌ ಆ್ಯಪ್‌ನಲ್ಲಿ (ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವ್ಯಕ್ತಿ ವಾಸಿಸುವ ಸ್ಥಳ, ಪ್ರಯಾಣಿಸಿದ ಸ್ಥಳದ ಕುರಿತ ಮಾಹಿತಿ ಪತ್ತೆ ಮಾಡುವ ಆ್ಯಪ್‌) ಸಮಸ್ಯೆಗಳು ತಲೆದೋರಿದ್ದರಿಂದ ಅರ್ಧದಷ್ಟು ‍ಪತ್ರಕರ್ತರನ್ನು ಕೆಲ ಪ್ರದೇಶಗಳಿಂದ ವಾಪಸ್ಸು ಕಳಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ತಮಗೆ ಮಾಹಿತಿ ನೀಡುತ್ತಿದ್ದ ಚೀನಾ ಪ್ರಜೆಗಳನ್ನು ಚೀನಾ ಆಡಳಿತವು ಬಂಧಿಸಿದೆ ಮತ್ತು ಹಿಂಸಿಸಿದೆ ಎಂದು ಶೇ 40ರಷ್ಟು ಪತ್ರಕರ್ತರು ತಿಳಿಸಿದ್ದಾರೆ. ತಮ್ಮ ಚೀನಾ ಸಹೋದ್ಯೋಗಿಗಳಿಗೆ ಆಡಳಿತದಿಂದ ಸಾಕಷ್ಟು ಒತ್ತಡವಿದ್ದ ಕುರಿತು ಶೇ 45 ವಿದೇಶಿ ಪತ್ರಕರ್ತರು ಮಾಹಿತಿ ನೀಡಿದ್ದಾರೆ.

ಈ ಎಲ್ಲಾ ಬೆಳವಣಿಗಳು ಚೀನಾದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಇರುವ ಸವಾಲುಗಳ ಕುರಿತು ಹೇಳುತ್ತವೆ ಎಂದು ವರದಿ ಹೇಳಿದೆ.

ಎಫ್‌ಸಿಸಿಸಿ 166 ಸದಸ್ಯರನ್ನು ಹೊಂದಿದೆ. ಅವರಲ್ಲಿ 102 ಸದಸ್ಯರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ.

‘ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌’ ಸಂಸ್ಥೆ 2022ರಲ್ಲಿ ಬಿಡುಗಡೆ ಮಾಡಿದ್ದ 180 ದೇಶಗಳ ‘ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ’ ಪಟ್ಟಿಯಲ್ಲಿ ಚೀನಾ 175ನೇ ಸ್ಥಾನ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT