ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2019ರ ಈಸ್ಟರ್‌ ದಾಳಿ: ಶ್ರೀಲಂಕಾದ ಮಾಜಿ ಸಚಿವರ ಬಂಧನ

Last Updated 24 ಏಪ್ರಿಲ್ 2021, 8:28 IST
ಅಕ್ಷರ ಗಾತ್ರ

ಕೊಲಂಬೊ: 2019ರ ಈಸ್ಟರ್‌ ದಾಳಿಗೆ ಕಾರಣರಾದ ಆತ್ಮಾಹುತಿ ಬಾಂಬರ್‌ಗಳಿಗೆ ನೆರವು ನೀಡಿದ ಆರೋಪದಡಿ ಮಾಜಿ ಸಚಿವ ಮತ್ತು ಅವರ ಸಹೋದರನನ್ನು ಶ್ರೀಲಂಕಾದ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಶ್ರೀಲಂಕಾದ ವಿರೋಧ ಪಕ್ಷ ಎಸ್‌ಜೆಬಿಯ ಪ್ರಮುಖ ಭಾಗವಾಗಿರುವ ಅಲ್ಪಸಂಖ್ಯಾತ ಮುಸ್ಲಿಂ ಪಕ್ಷದ ಮುಖಂಡ ರಿಷಾದ್ ಬತಿಯುದ್ದೀನ್ ಮತ್ತು ಅವರ ಸಹೋದರ ರಿಯಾಜ್ಬತಿಯುದ್ದೀನ್‌ ಅವರನ್ನು ಅವರ ನಿವಾಸಗಳಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ರಿಯಾಜ್‌ ಅವರನ್ನು ಕಳೆದ ವರ್ಷ ಮೇ ತಿಂಗಳು ಹಾಗೂ ರಿಷಾದ್ ಅವರನ್ನು ಅಕ್ಟೋಬರ್‌ ತಿಂಗಳಲ್ಲಿ ಮೊದಲಿಗೆ ಬಂಧಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ರಿಷಾದ್ ಅವರು ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು.

ಐಸಿಸ್‌ಗೆ ಸಂಬಂಧಿಸಿರುವ ನ್ಯಾಷನಲ್‌ ತೌಹೀದ್‌ ಜಮಾಅತ್‌ನ (ಎನ್‌ಟಿಜೆ) 9 ಆತ್ಮಾಹುತಿ ಬಾಂಬರ್‌ಗಳು 2019ರ ಏಪ್ರಿಲ್‌ 21 ರಂದು ಶ್ರೀಲಂಕಾದ ಮೂರು ಚರ್ಚ್‌ಗಳು ಮತ್ತು ಅನೇಕ ಐಷಾರಾಮಿ ಹೋಟೆಲ್‌ಗಳಲ್ಲಿ ದಾಳಿ ನಡೆಸಿದ್ದರು. ಆಗ 11 ಭಾರತೀಯರು ಸೇರಿದಂತೆ 258 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT