ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಟಬಯ ಸಿಂಗಪುರದಿಂದ ವಾಪಸಾಗಲಿದ್ದಾರೆ: ಶ್ರೀಲಂಕಾ ಕ್ಯಾಬಿನೆಟ್ ವಕ್ತಾರರ ಹೇಳಿಕೆ

Last Updated 26 ಜುಲೈ 2022, 11:18 IST
ಅಕ್ಷರ ಗಾತ್ರ

ಕೊಲಂಬೊ: ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಲೆಮರೆಸಿಕೊಂಡಿಲ್ಲ, ಸಿಂಗಪುರದಿಂದ ದೇಶಕ್ಕೆ ವಾಪಸಾಗುವ ನಿರೀಕ್ಷೆ ಇದೆ ಎಂದು ಕ್ಯಾಬಿನೆಟ್‌ ವಕ್ತಾರ ಬಂದುಲಾ ಗುಣವರ್ಧೆನ ಅವರು ಮಂಗಳವಾರ ತಿಳಿಸಿದ್ದಾರೆ.

ವಾರದ ಕ್ಯಾಬಿನೆಟ್‌ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದರೂ, ಗೊಟಬಯ ಅವರು ಯಾವಾಗ ವಾಪಸಾಗುತ್ತಾರೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಿಲ್ಲ.

ಶ್ರೀಲಂಕಾದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಗೊಟಬಯ ಅವರೇ ಕಾರಣ ಎಂದು ಆರೋಪಿಸಿದ್ದ ಜನರು, ಜುಲೈ 9ರಂದು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ನುಗ್ಗಿ ಪ್ರತಿಭಟಿಸಿದ್ದರು. ಪ್ರತಿಭಟನೆಗೆ ಬೆದರಿ ಮೊದಲು ಮಾಲ್ಡೀವ್ಸ್‌ಗೆ ತೆರಳಿದ್ದ ಗೊಟಬಯ ಅವರು, ಬಳಿಕ ಸಿಂಗಪುರಕ್ಕೆ ಪಲಾಯನ ಮಾಡಿದ್ದರು. ಸಿಂಗಪುರವು ಅವರಿಗೆ14 ದಿನಗಳ ತಾತ್ಕಾಲಿಕ ಭೇಟಿಗೆ ಪಾಸ್‌ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT