ಬುಧವಾರ, ಅಕ್ಟೋಬರ್ 21, 2020
25 °C

ಫ್ರಾನ್ಸ್‌ನಲ್ಲಿ ಕೋವಿಡ್‌–19 ಎರಡನೇ ಅಲೆ; ನಾಲ್ಕು ವಾರಗಳ ಕರ್ಫ್ಯೂ ಘೋಷಣೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಟಿವಿ ಮಾಧ್ಯಮದಲ್ಲಿ ಮಾತನಾಡಿದ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮಾಕ್ರಾನ್‌

ಪ್ಯಾರಿಸ್‌: ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆ ಪ್ರಭಾವ ಬೀರುತ್ತಿರುವ ಬೆನ್ನಲ್ಲೇ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮಾಕ್ರಾನ್‌ ಕರ್ಫ್ಯೂ ಘೋಷಿಸಿದ್ದಾರೆ. ಪ್ಯಾರಿಸ್‌ ಸೇರಿದಂತೆ ಹಲವು ನಗರಗಳಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.

ಶನಿವಾರದಿಂದ ಕರ್ಫ್ಯೂ ಜಾರಿಯಾಗಲಿದ್ದು, ನಾಲ್ಕು ವಾರಗಳ ವರೆಗೂ ಬೆಳಿಗ್ಗೆ 9ರಿಂದ ಬೆಳಿಗ್ಗೆ 6ರ ವರೆಗೂ ನಿರ್ಬಂಧವಿರಲಿದೆ ಎಂದು ಸ್ಪುಟ್ನಿಕ್‌ ವರದಿ ಮಾಡಿದೆ.

ಕರ್ಫ್ಯೂ ಸರಿಯಾದ ಕ್ರಮವಾಗಿದೆ ಎಂದು ಅಧ್ಯಕ್ಷ ಮ್ಯಾಕ್ರಾನ್‌ ಹೇಳಿದ್ದಾರೆ. 'ಇಲ್‌–ಡಿ–ಫ್ರಾನ್ಸ್‌, ಲಿಲ್ಲೆ, ಗ್ರಿನೋಬ್ಲ, ಲಿಯೊನ್‌, ಮಾರ್ಸೆಯ್, ಸಾಂಟೇಟಿಯನ್‌, ಕೊವಾನ್‌ ಸೇರಿದಂತೆ ಇತರೆ ಭಾಗಗಳಲ್ಲಿ ಕರ್ಫ್ಯೂ ಇರಲಿದೆ. ದೇಶದವು ಕೋವಿಡ್‌–19 ಎರಡನೇ ಅಲೆಯನ್ನು ಎದುರಿಸುತ್ತಿದ್ದು, ನಿಯಂತ್ರಣ ಕೈತಪ್ಪಿಲ್ಲ' ಎಂದಿದ್ದಾರೆ.

ಚಿಂತೆಗೆ ದೂಡುವ ಪರಿಸ್ಥಿತಿಯಲ್ಲಿ ನಾವೀಗ ಇದ್ದೇವೆ, ಆದರೆ ಸಾಂಕ್ರಾಮಿಕದ ಮೊದಲ ಅಲೆಗೆ ನಾವು ಅಂತ್ಯವಾಡಿದ್ದೇವೆ. ಎಂಟು ತಿಂಗಳಿನಿಂದ ನಮಗೆಲ್ಲರಿಗೂ ಪರಿಚಯವಾಗಿರುವ ವೈರಸ್‌ ಈಗ ಮರಳುತ್ತಿದೆ. ಇದನ್ನು ಎರಡನೇ ಅಲೆಯ ಸ್ಥಿತಿ ಎನ್ನಬಹುದು ಎಂದು ಮಾಕ್ರಾನ್‌ ಹೇಳಿದ್ದಾರೆ.

ಜುಲೈನಿಂದ ಫ್ರಾನ್ಸ್‌ನಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಇತ್ತೀಚೆಗೆ ದಾಖಲಾಗಿರುವ ನಿತ್ಯ ಪ್ರಕರಣಗಳ ಪೈಕಿ ಅತಿ ಹೆಚ್ಚು 27,000 ಪ್ರಕರಣಗಳು ಅಕ್ಟೋಬರ್‌ 10ರಂದು ವರದಿಯಾಗಿದೆ. ಬುಧವಾರದ ವರೆಗೂ ಫ್ರಾನ್ಸ್‌ನಲ್ಲಿ ಒಟ್ಟು 7,56,472 ಕೊರೊನಾ ಸೋಂಕು ಪ್ರಕರಣಗಳಿದ್ದು, 32,942 ಮಂದಿ ಸಾವಿಗೀಡಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು