ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾರಾದ ಇಸ್ಲಾಮಿಕ್‌ ಸ್ಟೇಟ್‌ ನಾಯಕನ ಹತ್ಯೆ: ಫ್ರಾನ್ಸ್‌ ಘೋಷಣೆ

Last Updated 16 ಸೆಪ್ಟೆಂಬರ್ 2021, 5:55 IST
ಅಕ್ಷರ ಗಾತ್ರ

ಬಮಾಕೊ (ಮಾಲಿ): ಸಹಾರಾದ ‘ಇಸ್ಲಾಮಿಕ್ ಸ್ಟೇಟ್’ ನಾಯಕ ಅಬು ಅಲ್‌– ವಲೀದ್‌ ಅಲ್‌–ಸಹರೋಯಿ ಎಂಬಾತನನ್ನು ಫ್ರೆಂಚ್‌ ಸೇನೆ ಕೊಂದಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯಲ್‌ ಮ್ಯಾಕ್ರನ್‌ ಘೋಷಿಸಿದ್ದಾರೆ.

ಎಂಟು ವರ್ಷಗಳಿಂದ ಸಹೇಲ್‌ ಪ್ರದೇಶದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಫ್ರೆಂಚ್‌ ಪಡೆಗಳಿಗೆ ಈ ಹತ್ಯೆಯಿಂದ ಪ್ರಮುಖ ಯಶಸ್ಸು ದೊರೆತಂತಾಗಿದೆ ಅವರು ಟ್ವೀಟ್‌ ಮಾಡಿದ್ದಾರೆ.

ಮಾಲಿಯಲ್ಲಿ ವಾರದಿಂದ ಉಗ್ರಗಾಮಿ ನಾಯಕನ ಸಾವಿನ ವದಂತಿಗಳು ಹರಿದಾಡುತ್ತಿತ್ತು. ಆದರೆ ಈ ಪ್ರದೇಶದ ಅಧಿಕಾರಿಗಳಿಂದ ಯಾವುದೇ ದೃಢೀಕರಣ ದೊರೆತಿರಲಿಲ್ಲ.

ಮಾಲಿ ಮತ್ತು ನೈಜರ್ ನಡುವಿನ ಗಡಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪು ಹತ್ತಾರು ದಾಳಿಗಳನ್ನು ನಡೆಸಿದೆ. ಆದರೂ ಅಲ್-ಸಹರೋಯಿ ಎಲ್ಲಿ ಹತನಾಗಿದ್ದಾನೆ ಎಂಬ ಮಾಹಿತಿ ತಕ್ಷಣಕ್ಕೆ ದೊರೆತಿಲ್ಲ. ಫ್ರಾನ್ಸ್ ಅಧ್ಯಕ್ಷರೂ ತಮ್ಮ ಟ್ವೀಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿಲ್ಲ. ಸಹೇಲ್‌ ಪ್ರದೇಶದಲ್ಲಿ ಇಸ್ಲಾಮಿಕ್‌ ಉಗ್ರರ ವಿರುದ್ಧ ಫ್ರೆಂಚ್‌ ಸೇನೆಯು 2013ರಿಂದ ಹೋರಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT