ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಅಧ್ಯಕ್ಷರಾಗಿ ಇಮ್ಯಾನುಯೆಲ್‌ ಮ್ಯಾಕ್ರಾನ್ ಮರು ಆಯ್ಕೆ

Last Updated 25 ಏಪ್ರಿಲ್ 2022, 2:41 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರಾನ್ಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್ ಅವರು ತಮ್ಮ ಪ್ರತಿಸ್ಪರ್ಧಿ ಮರೀನ್ ಲಿ ಪೆನ್ ಅವರನ್ನು ಪರಾಭವಗೊಳಿಸಿ, ಎರಡನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.

ಭಾನುವಾರ ಚುನಾವಣೆ ನಡೆದಿದ್ದು, ಮ್ಯಾಕ್ರಾನ್‌ ಅವರು ಶೇ 58.5ರಷ್ಟು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಫರ್ಧಿ, ಬಲಪಂಥೀಯ ಲಿ ಪೆನ್‌ ಅವರು ಶೇ 42ರಷ್ಟು ಮತ ಗಳಿಸಿದ್ದಾರೆ ಎಂದು ಸಮೀಕ್ಷೆ ನಡೆಸುವ ಸಂಸ್ಥೆಗಳು ಅಂದಾಜು ಮಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಈ ಎರಡು ದಶಕಗಳಲ್ಲಿ ದೇಶದ ಅಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಮೊದಲಿಗರೆಂಬ ಖ್ಯಾತಿಗೆ ಮ್ಯಾಕ್ರನ್ ಪಾತ್ರರಾಗಿದ್ದಾರೆ. ಆದರೆ ಪ್ರತಿಸ್ಪರ್ಧಿ ಲಿ ಪೆನ್ ಅವರ ಹೋರಾಟವೇನು ಸಾಧಾರಣವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಬಲಪಂಥೀಯರು ಪ್ರಬಲ ಪೈಪೋಟಿ ನೀಡಿದ್ದಾರೆ. ಇದು ದೇಶ ಧ್ರುವೀಕರಣಗೊಂಡಿರುವುದನ್ನು ತೋರಿಸುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

44 ವರ್ಷ ವಯಸ್ಸಿನ ಮ್ಯಾಕ್ರಾನ್‌ ಅವರಿಗೆ ಈ ಬಾರಿಯ ಅಧ್ಯಕ್ಷ ಸ್ಥಾನ ಸವಾಲುಗಳಿಂದ ಕೂಡಿರಲಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಜೂನ್‌ನಲ್ಲಿ ಸಂಸತ್ತಿನ ಚುನಾವಣೆಗಳು ನಡೆಯಲಿವೆ. ಅಲ್ಲಿ ಬಹುಮತ ಗಳಿಸುವುದು ಮ್ಯಾಕ್ರಾನ್‌ ಅವರಿಗೆ ಅತ್ಯಗತ್ಯ.

ಇನ್ನು, ಅಧ್ಯಕ್ಷೀಯ ಚುನಾವಣೆ ಸ್ಪಷ್ಟ ಅಂಕಿ ಅಂಶಗಳು ಸೋಮವಾರ ಪ್ರಕಟಗೊಳ್ಳಲಿವೆ ಎಂದು ವರದಿಯಾಗಿದೆ.

ಚುನಾವಣೆಯಲ್ಲಿ ಗೆಲುವಿನ ಬಗ್ಗೆ ಮಾತನಾಡಿರುವ ಮ್ಯಾಕ್ರಾನ್‌, ‘ತಮ್ಮ ಮುಂದಿನ ಐದು ವರ್ಷಗಳ ಅವಧಿಯು ವಿಭಿನ್ನವಾಗಿರಲಿದೆ’ ಎಂದು ಹೇಳಿದರು. ಜತೆಗೆ, ಫ್ರಾನ್ಸ್‌ ಜನರಿಗೆ ‘ಧನ್ಯವಾದ’ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT