ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮತ ಕಳೆದುಕೊಂಡ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್

Last Updated 20 ಜೂನ್ 2022, 12:54 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರಾನ್ಸ್‌ನಲ್ಲಿ ನಡೆದ ‌ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ದೇಶದ ಅಧ್ಯಕ್ಷಇಮ್ಯಾನುವೆಲ್‌ ಮ್ಯಾಕ್ರನ್ ಅವರು ಸೋಮವಾರ ಸಂಸತ್‌ನಲ್ಲಿ ಬಹುಮತ ಕಳೆದುಕೊಂಡಿದ್ದಾರೆ.

44ರ ಹರೆಯದ ಮ್ಯಾಕ್ರನ್‌ ಅವರ ‘ಟುಗೆದರ್‌’ ಪಕ್ಷಕ್ಕೆ ಅಧಿಕಾರ ಉಳಿಸಿಕೊಳ್ಳಲು ಅಗತ್ಯವಿದ್ದ ಸ್ಥಾನಗಳು ಲಭಿಸದೇ, ಹಿನ್ನಡೆಯಾಗಿದೆ. 577 ಸದಸ್ಯ ಬಲದ ಸಂಸತ್‌ನಲ್ಲಿ ಅಧಿಕಾರ ಹಿಡಿಯಲು 289 ಸ್ಥಾನಗಳು ಬೇಕಿತ್ತು. ಆದರೆ, ಆಂತರಿಕ ಸಚಿವಾಲಯದ ಪ್ರಕಾರ ಮ್ಯಾಕ್ರನ್‌ ನೇತೃತ್ವದ ಎಡಪಂಥದ ಒಕ್ಕೂಟ ಸೋಮವಾರ ಮುಂಜಾನೆ ಪ್ರಕಟವಾದ ಫಲಿತಾಂಶದಲ್ಲಿ 245 ಸ್ಥಾನಗಳನ್ನು ಪಡೆದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಧಿಕಾರ ಉಳಿಸಿಕೊಳ್ಳಬೇಕೆಂದರೆ ಮ್ಯಾಕ್ರನ್‌ ಅವರು ಈಗ ಮತ್ತೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗಿದೆ.

ಏಪ್ರಿಲ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಲಪಂಥೀಯರನ್ನು ಸೋಲಿಸಿ ಎರಡು ದಶಕಗಳಲ್ಲಿ ಎರಡನೇ ಅವಧಿಗೆ ಗೆದ್ದ ಮೊದಲ ಫ್ರಾನ್ಸ್‌ ಅಧ್ಯಕ್ಷ ಎನ್ನುವಶ್ರೇಯ ಗಿಟ್ಟಿಸಿದ್ದ ಮ್ಯಾಕ್ರನ್ ಅವರಿಗೆ ಈ ಫಲಿತಾಂಶವುಆಘಾತಕಾರಿ ಆಗಿದೆ.

‘ಈ ಪರಿಸ್ಥಿತಿಯು ನಮ್ಮ ದೇಶಕ್ಕೆ ಅಪಾಯ ಉಂಟುಮಾಡುತ್ತದೆ. ಈಗ ನಮ್ಮ ಎದುರು ಸವಾಲುಗಳಿವೆ. ಅಧಿಕಾರ ಉಳಿಸಿಕೊಳ್ಳಲು ಬೇಕಾದ ಬಹುಮತಕ್ಕೆ ನಾವು ನಾಳೆಯಿಂದಲೇ ಕೆಲಸ ಮಾಡುತ್ತೇವೆ’ಎಂದು ಪ್ರಧಾನಿ ಎಲಿಜಬೆತ್ ಬೋರ್ನ್ ಹೇಳಿದ್ದಾರೆ.

ಜುಲೈನಲ್ಲಿ ಅವಿಶ್ವಾಸ ನಿರ್ಣಯ:ಮ್ಯಾಕ್ರನ್ ಅವರಸರ್ಕಾರದ ವಿರುದ್ಧಜುಲೈ 5ರಂದು ಅವಿಶ್ವಾಸ ನಿರ್ಣಯ ಮಂಡಿಸುವುದಾಗಿಫ್ರಾನ್ಸ್‌ನ ಎಡಪಂಥೀಯ ನ್ಯೂಪ್ಸ್ ಮೈತ್ರಿಕೂಟವು ಸೋಮವಾರ ಹೇಳಿದೆ.

ಭಾನುವಾರದ ಚುನಾವಣೆಯ ಫಲಿತಾಂಶದ ನಂತರ ಸಂಸತ್ತಿನ ಕೆಳಮನೆಯಲ್ಲಿ ಎರಡನೇ ಅತಿ ದೊಡ್ಡ ಗುಂಪಾಗಿ70ರ ಹರೆಯದ ಜೀನ್‌ ಲುಕ್‌ ಮೆಲೆಂಚಾನ್‌ ಅವರ ನೇತೃತ್ವದ ನ್ಯೂಪ್ಸ್‌ ಹೊರಹೊಮ್ಮಿದೆ. ಇದು 135 ಸ್ಥಾನಗಳನ್ನು ಗೆದ್ದಿದೆ. ಆದರೆ, ಅವಿಶ್ವಾಸ ನಿರ್ಣಯ ಅಂಗೀಕರಿಸಲು ಸಾಕಾಗುವಷ್ಟು ಸ್ವಂತ ಮತಗಳನ್ನು ನೂಪ್ಸ್‌ ಹೊಂದಿಲ್ಲ. ಆದರೆ, ಸಂಸತ್ತಿನಲ್ಲಿ ಕೆಲವು ಮಿತ್ರಪಕ್ಷಗಳನ್ನು ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT