ಮಂಗಳವಾರ, ಅಕ್ಟೋಬರ್ 19, 2021
23 °C

ಶೃಂಗ್ಲಾ–ಗೊಟಬಯ ರಾಜಪಕ್ಷೆ ಭೇಟಿ: ದ್ವಿಪಕ್ಷೀಯ ಸಂಬಂಧ ವೃದ್ಧಿ ಚರ್ಚೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲೊಂಬೊ: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ಮಂಗಳವಾರ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ನಡುವಿನ ಸಮಗ್ರ ದ್ವಿಪಕ್ಷೀಯ ಪಾಲುದಾರಿಕೆಯನ್ನು ಮತ್ತಷ್ಟು ಮುಂದುವರಿಸುವ ಮಾರ್ಗಗಳ ಕುರಿತು ಚರ್ಚಿಸಿದರು.

ನಾಲ್ಕು ದಿನಗಳ ಪ್ರವಾಸಕ್ಕಾಗಿ ಶನಿವಾರ ಶ್ರೀಲಂಕಾಕ್ಕೆ ಆಗಮಿಸಿದ ಶೃಂಗ್ಲಾ ಅವರು, ಈ ಪ್ರವಾಸದ ಅವಧಿಯಲ್ಲಿ ದ್ವೀಪರಾಷ್ಟ್ರದ ನಾಯಕರೊಂದಿಗೆ ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಹಕಾರ ಸಂಬಂಧದ ಬಲವರ್ಧನೆ ಕುರಿತು ಚರ್ಚಿಸಿದರು. 

ಶೃಂಗ್ಲಾ ಅವರು ಸೋಮವಾರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೆ ಮಾತುಕತೆ ನಡೆಸಿದ್ದರು. ತಮಿಳು ನಾಯಕರೊಂದಿಗೂ ಮಾತುಕತೆ ನಡೆಸಿದ್ದ ಅವರು, ಲಂಕಾದಲ್ಲಿ ಅಲ್ಪಸಂಖ್ಯಾತರಾಗಿರುವ ತಮಿಳರ ಹಕ್ಕುಗಳ ಪೂರ್ಣ ರಕ್ಷಣೆಗೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ್ದರು. 

1987ರಲ್ಲಿ ನಡೆದ ಭಾರತ–ಲಂಕಾ ಒಪ್ಪಂದದ 13ನೇ ತಿದ್ದುಪಡಿಯು ತಮಿಳು ಸಮುದಾಯದವರಿಗೆ ಅಧಿಕಾರ ಹಂಚುವ ವಿಷಯವನ್ನು ಪ್ರಸ್ತಾಪಿಸುತ್ತದೆ. ಇದನ್ನು ಅಕ್ಷರಶಃ ಜಾರಿಗೆ ತರಲು ಭಾರತ ಒತ್ತಾಯಿಸುತ್ತಲೇ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು