ಗುರುವಾರ , ಅಕ್ಟೋಬರ್ 6, 2022
23 °C

ಗಾಂಧಿ ಪ್ರತಿಮೆ ಧ್ವಂಸ: ಭಾರತೀಯ ಸಮುದಾಯದಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದರ ಪ್ರಕರಣ ಮತ್ತು ಇತ್ತೀಚೆಗೆ ಅಮೆರಿಕದಲ್ಲಿ ಹೆಚ್ಚಾಗಿರುವ ಜನಾಂಗೀಯ ದ್ವೇಷದ ಕಾರಣ ಹಿಂಸೆ ವಿರುದ್ಧ ಭಾರತ ಮೂಲದ ಅಮೆರಿಕನ್ನರು ಇಲ್ಲಿಯ ಟೈಮ್‌ ಸ್ಕ್ವೇರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು.

ಪ್ರಭಾವಿ ಸಂಘಟನೆಗಳಲ್ಲೊಂದಾದ ಫೆಡೆರೇಷನ್‌ ಆಫ್‌ ಇಂಡಿಯನ್‌ ಅಮೆರಿಕನ್ಸ್‌(ಎಫ್‌ಐಎ) ಮತ್ತು ಇತರ ಭಾರತೀಯ ಸಂಘಟನೆಗಳ ಸಹಯೋಗದಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ರೀತಿಯ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನೇತೃತ್ವದ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳನ್ನು ಪ್ರತಿಭಟನಾಕಾರರು ಕೋರಿದರು. 

ಹಿಂಸಾಚಾರದಲ್ಲಿ ಸಂತ್ರಸ್ತರಾದ ಮತ್ತು ಸಮುದಾಯದ ಜನರನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದವರ ಗೌರವಾರ್ಥವಾಗಿ ಮೌನಾಚರಣೆ ಮತ್ತು ಪ್ರಾರ್ಥನಾ ಸಭೆಯನ್ನು ಕೂಡಾ ಭಾರತೀಯ ಸಮುದಾಯದ ಸದಸ್ಯರು ಈ ವೇಳೆ ಹಮ್ಮಿಕೊಂಡಿದ್ದರು. 

ನ್ಯೂಯಾರ್ಕ್‌ ನಗರದ ದೇವಸ್ಥಾನವೊಂದರ ಎದುರಿದ್ದ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ಆಗಸ್ಟ್‌ನಲ್ಲಿ ಧ್ವಂಸಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು