ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಅಡುಗೆ ಅನಿಲ ಪೈಪ್‌ ಸ್ಫೋಟ: 11 ಮಂದಿ ಸಾವು

Last Updated 13 ಜೂನ್ 2021, 6:57 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ‘ಚೀನಾದ ಮಧ್ಯ ಭಾಗದ ವಸತಿ ಪ್ರದೇಶದಲ್ಲಿ ಅಡುಗೆ ಅನಿಲದ ಪೈಪ್‌ ಸ್ಫೋಟಗೊಂಡ ಪರಿಣಾಮ 11 ಮಂದಿ ಮೃತಪಟ್ಟಿದ್ದು 37 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ಸಿಸಿಟಿವಿ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.

‘ಹುಬೆ ಪ್ರಾಂತ್ಯದ ಶಿಯಾನ್‌ದಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ 11 ಗಂಟೆ ವೇಳೆಗೆ ಅಲ್ಲಿಂದ ಸುಮಾರು 144 ಜನರನ್ನು ಸ್ಥಳಾಂತರಿಸಲಾಗಿದೆ. ಈ ಸ್ಫೋಟದಿಂದಾಗಿ ಮಾರುಕಟ್ಟೆಯ ಕಟ್ಟಡವೊಂದು ಕುಸಿದಿದೆ’ ಎಂದು ವರದಿಯಾಗಿದೆ.

‘ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದ್ದು, ಅವರಿಗೆ ತುರ್ತು ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT