ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ರೆಮ್‌ಡಿಸಿವಿರ್‌ನ 4.5 ಲಕ್ಷ ಚುಚ್ಚುಮದ್ದು ದೇಣಿಗೆ: ಗಿಲೀಡ್‌

ಔಷಧ ಉತ್ಪಾದನೆ ಹೆಚ್ಚಿಸಲು ಕ್ರಮ: ಕಂಪನಿ ಹೇಳಿಕೆ
Last Updated 27 ಏಪ್ರಿಲ್ 2021, 10:34 IST
ಅಕ್ಷರ ಗಾತ್ರ

ನವದೆಹಲಿ/ಕ್ಯಾಲಿಫೋರ್ನಿಯಾ: ವೈರಾಣು ನಿರೋಧಕ ರೆಮ್‌ಡಿಸಿವಿರ್ ಔಷಧ ಉತ್ಪಾದನೆಯ ಹೆಚ್ಚಿಸಲು ಕ್ರಮ ಕೈಗೊಳ್ಳುವ ಜತೆಗೆ, ತಕ್ಷಣದಲ್ಲಿ ರೆಮ್‌ಡಿಸಿವಿರ್‌ನ 4.5 ಲಕ್ಷ ಚುಚ್ಚುಮದ್ದುಗಳನ್ನು ಭಾರತಕ್ಕೆ ದೇಣಿಗೆಯಾಗಿ ನೀಡುವುದಾಗಿ ಔಷಧ ತಯಾರಕಾ ಸಂಸ್ಥೆ ಗಿಲೀಡ್‌ ಸೈನ್ಸಸ್‌ ತಿಳಿಸಿದೆ.

ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ತ್ವರಿತಗತಿಯಲ್ಲಿ ಹೆಚ್ಚಾಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗಿಲೀಡ್ ಕಂಪನಿ, ಭಾರತದಲ್ಲಿ ಸ್ಥಳೀಯವಾಗಿ ರೆಮ್‌ಡಿಸಿವಿರ್ ಔಷಧ ಉತ್ಪಾದನೆ ಹೆಚ್ಚಿಸಲು ಪಾಲುದಾರ ಕಂಪನಿಗಳಿಗೆ ಸ್ವಯಂ ಪ್ರೇರಿತವಾಗಿ ಪರವಾನಗಿ ಜತೆಗೆ ತಾಂತ್ರಿಕ ಸಹಾಯವನ್ನು ನೀಡುವುದಾಗಿ ತಿಳಿಸಿದೆ.

ಭಾರತದಲ್ಲಿ, ಕೋವಿಡ್‌ ಸೋಂಕಿಗೆ ಒಳಗಾಗಿರುವ ವಯಸ್ಕರು ಮತ್ತು ತೀವ್ರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಚಿಕಿತ್ಸೆಗಾಗಿ ರೆಮ್‌ಡಿಸಿವಿರ್‌ ಔಷಧವನ್ನು ತುರ್ತು ಬಳಕೆಗಾಗಿ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT