ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದಾದ್ಯಂತ ಉದ್ಯೋಗ ಸ್ಥಳದಲ್ಲಿ ಹಿಂಸೆ, ಕಿರುಕುಳ ವ್ಯಾಪಕ: ಸಮೀಕ್ಷಾ ವರದಿ

Last Updated 6 ಡಿಸೆಂಬರ್ 2022, 11:29 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಜಾಗತಿಕವಾಗಿ ಉದ್ಯೋಗ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಂದಿಸುವುದು, ಅವರಿಗೆ ಕಿರುಕುಳ ನೀಡುತ್ತಿರುವುದು ವ್ಯಾಪಕವಾಗಿದೆ. ಅದರಲ್ಲೂ, ಮಹಿಳೆಯರೇ ಹೆಚ್ಚಾಗಿ ನಿಂದನೆ, ಕಿರುಕುಳದಂತಹ ದೌರ್ಜನ್ಯಕ್ಕೆ ಗುರಿಯಾಗುತ್ತಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ.

ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಬಿಡುಗಡೆ ಮಾಡಿರುವ ಸಮೀಕ್ಷಾ ವರದಿಯಲ್ಲಿ ಈ ಕುರಿತು ವಿವರಿಸಲಾಗಿದೆ.

ಉದ್ಯೋಗ ಸ್ಥಳಗಳಲ್ಲಿನ ಕಿರುಕುಳ ಹಾಗೂ ಹಿಂಸೆ ಕುರಿತು ಇದೇ ಮೊದಲ ಬಾರಿಗೆ ನಡೆಸಿರುವ ಜಾಗತಿಕ ಸಮೀಕ್ಷೆಯಲ್ಲಿ ಈ ಅಂಶಗಳು ಕಂಡುಬಂದಿವೆ ಎಂದು ಐಎಲ್‌ಒ ಹೇಳಿದೆ. ಲಾಯ್ಡ್ಸ್‌ ರಜಿಸ್ಟರ್‌ ಫೌಂಡೇಷನ್‌ ಹಾಗೂ ಗ್ಯಾಲಪ್ ಎಂಬ ಸಂಸ್ಥೆಗಳು ಈ ಸಮೀಕ್ಷೆಯಲ್ಲಿ ಐಎಲ್‌ಒಯೊಂದಿಗೆ ಕೈಜೋಡಿಸಿದ್ದವು.

‘ಉದ್ಯೋಗ ಸ್ಥಳದಲ್ಲಿ ಹಿಂಸೆ ಹಾಗೂ ಕಿರುಕುಳ ನೀಡುವುದು ಅಪಾಯಕಾರಿ ವಿದ್ಯಮಾನ. ಉದ್ಯೋಗಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಇವು ಭಾರಿ ಪರಿಣಾಮವನ್ನುಂಟು ಮಾಡುತ್ತವೆ’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಉದ್ಯೋಗಿಗೆ ಮಾತ್ರವಲ್ಲ, ಉದ್ಯಮಗಳು ಹಾಗೂ ಸಮಾಜದ ಮೇಲೂ ಪರಿಣಾಮವನ್ನುಂಟಾಗುತ್ತದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ’ ಎಂದು ವಿವರಿಸಲಾಗಿದೆ.121 ದೇಶಗಳ 75 ಸಾವಿರದಷ್ಟು ಉದ್ಯೋಗಿಗಳು ಸಮೀಕ್ಷೆಯ ಭಾಗವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT