ಬುಧವಾರ, ಜನವರಿ 20, 2021
21 °C

ಚೀನಾದ ಚಿನ್ನದ ಗಣಿಯಲ್ಲಿ ಸ್ಫೋಟ: ಅಪಾಯದಲ್ಲಿ 22 ಕಾರ್ಮಿಕರು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಬೀಜಿಂಗ್‌: 'ಈಶಾನ್ಯ ಚೀನಾದ ಚಿನ್ನದ ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು, ಅದರೊಳಗೆ 22 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಹೀಗಾಗಿ ಸ್ಥಳಕ್ಕೆ ರಕ್ಷಣಾ ತಂಡವನ್ನು ಅಧಿಕಾರಿಗಳು ರವಾನಿಸಿದ್ದಾರೆ,' ಎಂದು ಸುದ್ದಿ ಸಂಸ್ಥೆ ಶಿನ್ಹುವಾ ಮಂಗಳವಾರ ವರದಿ ಮಾಡಿದೆ.

'ಪೂರ್ವ ಶಾಂಡೊಂಗ್ ಪ್ರಾಂತ್ಯದಲ್ಲಿರುವ ಶಿಚೆಂಗ್ ಪಟ್ಟಣ ಸಮೀಪದ ಗಣಿಯಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟವು ಸಂವಹನ ವ್ಯವಸ್ಥೆಗೆ ಹಾನಿಯುಂಟು ಮಾಡಿದೆ. ಪರಿಣಾಮವಾಗಿ ಗಣಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ಸಂಪರ್ಕಿಸಲು ರಕ್ಷಣಾ ತಂಡಕ್ಕೆ ಇದುವರೆಗೆ ಸಾಧ್ಯವಾಗಿಲ್ಲ,' ಎಂದೂ ವರದಿ ತಿಳಿಸಿದೆ

ಚಿನ್ನದ ಗಣಿಯು 'ಶಾಂಡೊಂಗ್ ವುಕೈಲಾಂಗ್ ಇನ್ವೆಸ್ಟ್‌ಮೆಂಟ್ ಕೋ. ಲಿಮಿಟೆಡ್‌'ನ ಒಡೆತನದಲ್ಲಿದೆ. ಚೀನಾದ ನಾಲ್ಕನೇ ಅತಿದೊಡ್ಡ ಗಣಿ ಸಂಸ್ಥೆಯಾದ ಜಾವೋಜಿನ್ ಮೈನಿಂಗ್'ನ 2019 ರ ವಾರ್ಷಿಕ ವರದಿಯಲ್ಲಿ ಇದನ್ನು 'ಸಹವರ್ತಿ ಅಂಗಸಂಸ್ಥೆ' ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು