ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್: ಸೂಕಿ ಕಾರಾಗೃಹ ಶಿಕ್ಷೆ 26 ವರ್ಷಕ್ಕೆ ವಿಸ್ತರಣೆ

Last Updated 12 ಅಕ್ಟೋಬರ್ 2022, 14:11 IST
ಅಕ್ಷರ ಗಾತ್ರ

ಬ್ಯಾಂಕಾಕ್‌ :ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್‌ ಸೂಕಿ ಅವರನ್ನು ಇನ್ನೂ ಎರಡು ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿ ಎಂದು ಇಲ್ಲಿನ ನ್ಯಾಯಾಲಯ ಘೋಷಿಸಿ, ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ.

ಹೀಗಾಗಿ ಸೂಕಿ ಅವರು ಈ ಹಿಂದಿನ ಅಪರಾಧಗಳಿಗೆ ವಿಧಿಸಿದ್ದ ಶಿಕ್ಷೆಯೂ ಸೇರಿ ಒಟ್ಟು 26 ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾದಕ ವಸ್ತು ಕಳ್ಳಸಾಗಣೆಗೆ ಉದ್ಯಮಿ ಮಾಂಗ್‌ ವೀಕ್ ಅವರಿಂದ 5.50 ಲಕ್ಷ ಡಾಲರ್‌ (₹4.52 ಕೋಟಿ) ಲಂಚ ಪಡೆದ ಪ್ರಕರಣದಲ್ಲಿಸೂಕಿ ಅವರಿಗೆ ಶಿಕ್ಷೆ ಪ್ರಕಟಿಸಲಾಗಿದೆ. ಆದರೆ ಈ ಆರೋಪವನ್ನು ಸೂಕಿ ನಿರಾಕರಿಸಿದ್ದಾರೆ.

ಮ್ಯಾನ್ಮಾರ್‌ ಸೇನೆ 2021ರ ಫೆಬ್ರುವರಿ 1ರಂದು ಚುನಾಯಿತ ಸರ್ಕಾರವನ್ನು ಕಿತ್ತೆಸೆದು, 77 ವರ್ಷದ ಸೂಕಿ ಅವರನ್ನು ಬಂಧಿಸಿ ಭ್ರಷ್ಟಾಚಾರ, ವಲಸೆ ಕಾನೂನು ಉಲ್ಲಂಘನೆ ಸೇರಿ ವಿವಿಧ ಪ್ರಕರಣದಲ್ಲಿ ಶಿಕ್ಷೆ ವಿಧಿಸಿ ಜೈಲಿನಲ್ಲಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT