ಸೋಮವಾರ, ಡಿಸೆಂಬರ್ 5, 2022
19 °C

ಅಥೆನ್ಸ್: ದೋಣಿ ಮುಳುಗಿ 22 ಮಂದಿ ವಲಸಿಗರ ಸಾವು

ಎಪಿ Updated:

ಅಕ್ಷರ ಗಾತ್ರ : | |

ಅಥೆನ್ಸ್: ವಲಸಿಗರು ಇದ್ದ ದೋಣಿ ಮುಳುಗಿ ಐವರು ಮಕ್ಕಳು ಸೇರಿ 22 ಮಂದಿ ಮೃತಪಟ್ಟ ಘಟನೆ ಗ್ರೀಕ್‌ ರಾಜಧಾನಿಯ ಪೂರ್ವದ ಇವಿಯಾ ಮತ್ತು ಆಂಡ್ರೋಸ್ ದ್ವೀಪಗಳ ನಡುವಿನ ಸಾಗರದಲ್ಲಿ ಸಂಭವಿಸಿದೆ.

ಈ ಘಟನೆ ಮಂಗಳವಾರ ನಡೆದಿದೆ. ಕಾಣೆಯಾದ 34 ಮಂದಿಗೆ ಶೋಧ ಮುಂದುವರಿದಿದೆ ಎಂದು ಗ್ರೀಕ್‌ನ ಕರಾವಳಿ ಕಾವಲುಪಡೆ ಗುರುವಾರ ತಿಳಿಸಿದೆ. 

ದೋಣಿ ಮುಳುಗಿದಾಗ 12 ಮಂದಿ ಪುರುಷರು ಮಾತ್ರ ಬದುಕುಳಿದಿದ್ದಾರೆ. ಇವರಲ್ಲಿ ಒಂಬತ್ತು ಮಂದಿ ಈಜಿಕೊಂಡು ಹತ್ತಿರದ ದ್ವೀಪದ ಕಲ್ಲುಬಂಡೆಗಳ ಮೇಲೆ ಆಶ್ರಯ ಪಡೆದಿದ್ದರು. ಟರ್ಕಿಯೆ ದೇಶದ ಕರಾವಳಿಯ ಇಜ್ಮಿರ್‌ನಿಂದ 68 ವಲಸಿಗರು ಈ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು