ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಚ್‌–1ಬಿ ವೀಸಾ: 60 ದಿನದ ಗಡುವು, ತಪ್ಪು ಗ್ರಹಿಕೆ

ಕೆಲಸ ಕಳೆದುಕೊಂಡ ಎಚ್‌–1ಬಿ ವೀಸಾ ಉಳ್ಳವರ ವಾಸ್ತವ್ಯ – ಅಮೆರಿಕ ಹೇಳಿಕೆ
Last Updated 28 ಮಾರ್ಚ್ 2023, 19:34 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಸಿಬ್ಬಂದಿ ಕಡಿತದಡಿ ಕೆಲಸ ಕಳೆದುಕೊಂಡ, ಎಚ್‌–1ಬಿ ವೀಸಾವುಳ್ಳವರು 60 ದಿನದಲ್ಲಿ ದೇಶ ಬಿಡಬೇಕು ಎಂಬುದು ತಪ್ಪುಗ್ರಹಿಕೆ. ದೇಶದಲ್ಲಿ ಉಳಿಯಲು ಬಹು ಆಯ್ಕೆಗಳಿವೆ ಎಂದು ಅಮೆರಿಕದ ಪೌರತ್ವ, ವಲಸೆ ಸೇವೆ ವಿಭಾಗ (ಯುಎಸ್‌ ಸಿಐಎಸ್‌) ತಿಳಿಸಿದೆ.

ವಿಭಾಗದ ನಿರ್ದೇಶಕ ಉರ್ ಎಂ.ಜದ್ದೌ ಅವರು, ‘ಬಹುಆಯ್ಕೆಗಳಿರುವ ವಿಷಯ ಬಹುಶಃ ಅವರಿಗೆ ಅರಿವಿಲ್ಲ. ಕೆಲಸ ಕಳೆದುಕೊಂಡ 60 ದಿನದಲ್ಲಿ ದೇಶ ತೊರೆಯದೇ ಅನ್ಯ ಮಾರ್ಗಗಳಿಲ್ಲ ಎಂದೇ ಭಾವಿಸಿ ದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಎಚ್‌–1ಬಿ ವೀಸಾ ಇದ್ದು, ಕೆಲಸ ಕಳೆದುಕೊಂಡದ್ದರ ಪರಿಣಾಮ ಕುರಿತು ಗಮನಸೆಳೆದು 60 ದಿನದ ಗಡುವು ವಿಸ್ತರಿಸಲು ಕೋರಿ ಫೌಂಡೇಷನ್‌ ಫಾರ್ ಇಂಡಿಯಾ ಅಂಡ್‌ ಇಂಡಿಯಾ ಡಯ ಸ್ಪೊರಾ ಸ್ಟಡೀಸ್‌ (ಎಫ್‌ಐ ಐಡಿಎಸ್‌) ಪತ್ರ ಬರೆದಿತ್ತು. ಇದಕ್ಕೆ ಜದ್ದೌ
ಪ್ರತಿಕ್ರಿಯಿಸಿದ್ದಾರೆ.

‘ಮುಖ್ಯವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಿಬ್ಬಂದಿಯ ಈಗಿನ ವಾಸ್ತವ ಸ್ಥಿತಿಯ ಅರಿವು ನಮಗಿದೆ. ವಲಸಿಗ ಯೇತರ ಸಿಬ್ಬಂದಿ ಕೆಲಸ ಕಳೆದುಕೊಂಡಾಗ ಸ್ವಯಂಪ್ರೇರಿತವಾಗಿ ಸಹಜವಾಗಿ ಇರುವ ನಾಲ್ಕು ಆಯ್ಕೆಗಳಲ್ಲಿ ಒಂದನ್ನು ಪರಿಗಣಿಸಬೇಕು. ಅರ್ಹರಾಗಿದ್ದಲ್ಲಿ ನಿಗದಿತ ಅವಧಿಯವರೆಗೆ ಅವರು ಅಮೆರಿಕದಲ್ಲಿಯೇ ವಾಸ್ತವ್ಯವನ್ನು ಮುಂದುವರಿಸಬಹುದು’ ಎಂದರು.

ಈ ಆಯ್ಕೆಗಳಲ್ಲಿ ವಲಸಿಗಯೇತರ ಸ್ಥಾನಮಾನವನ್ನು ಹೊಂದಾಣಿಕೆ ಸ್ಥಾನ ಮಾನಕ್ಕೆ ಬದಲಿಸಲು ಕೋರಿ ಅರ್ಜಿ ಸಲ್ಲಿಸುವುದು. ಉದ್ಯೋಗದಾತರ ದೃಢೀಕರಣ ದಾಖಲೆಗೆ ಪೂರಕವಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವುದು ಅಥವಾ ಉದ್ಯೋಗದಾತ ಸಂಸ್ಥೆಯ ಬದಲಾ ವಣೆಗೆ ಸಂಬಂಧಿಸಿದಂತೆ ಇರುವ ಅರ್ಜಿ ಸಲ್ಲಿಸುವುದು ಸೇರಿದೆ ಯುಎಸ್‌ಸಿಐಎಸ್‌ ವಿವರಿಸಿದೆ.

‘ಈ ಪೈಕಿ ಒಂದು ಆಯ್ಕೆಯು ಊರ್ಜಿತವಾದರೂ ಗರಿಷ್ಠ 60 ದಿನ ಹೆಚ್ಚುವರಿ ಕಾಲಾವಕಾಶ ಸಿಗಲಿದೆ. ಇಂಥ ಸಂದರ್ಭದಲ್ಲಿ ಹಿಂದಿನ ವಲಸಿಗಯೇತರರ ಸ್ಥಾನಮಾನ ಅವಧಿ ಮುಗಿದಿದ್ದರೂ ಹೆಚ್ಚುವರಿ 60 ದಿನ ಉಳಿಯುವ ಕಾಲಾವಕಾಶ ಸಿಗಲಿದೆ’ ಎಂದು ವಿವರಿಸಿದೆ.

‘ಹೆಚ್ಚುವರಿ ಅವಧಿಯಲ್ಲಿಯೂ ನಿರ್ದಿಷ್ಟ ಸಿಬ್ಬಂದಿಗೆ ಯಾವುದೇ ಪರ್ಯಾಯ ಸಿಗದಿದ್ದರೆ, ಆತ ಮತ್ತು ಆತನ ಕುಟುಂಬವು 60 ದಿನ ಅಥವಾ ಅನುಮತಿ ನೀಡಲಾದ ಹೆಚ್ಚುವರಿ ಸಮಯ, ಯಾವುದು ಮೊದಲೊ ಆ ಅವಧಿ ಯಲ್ಲಿ ದೇಶವನ್ನು ತೊರೆಯಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT