ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಪಟ್ಟಿಯಲ್ಲಿ ಕದನ ವಿರಾಮ: 'ಇದು ನಮಗೆ ದೊರೆತ ಜಯ' ಎಂದ ಹಮಸ್‌ ಮುಖಂಡ

Last Updated 21 ಮೇ 2021, 17:36 IST
ಅಕ್ಷರ ಗಾತ್ರ

ಗಾಜಾ: ಇಸ್ರೇಲ್‌ ಮತ್ತು ಇಸ್ಲಾಮಿಸ್ಟ್ ಸಮೂಹ ಹಮಾಸ್‌ ನಿಯಂತ್ರಣದಲ್ಲಿ ಇರುವ ಗಾಜಾ ಪಟ್ಟಿಯ ನಡುವೆ 11 ದಿನದ ತೀವ್ರ ಹೋರಾಟದ ನಂತರ ಕದನವಿರಾಮ ಏರ್ಪಟ್ಟಿದೆ.

11 ದಿನಗಳ ಯುದ್ಧದಲ್ಲಿ ಸುಮಾರು 240 ಜನರು ಸತ್ತಿದ್ದು, ಹಲವರು ಗಾಯಗೊಂಡಿದ್ದರು. ಉಭಯ ಕಡೆಯಿಂದ ರಾಕೆಟ್‌ಗಳ ದಾಳಿ ನಡೆದು ಕಟ್ಟಡಗಳು ನೆಲಸಮಗೊಂಡಿದ್ದು, ಹಲವರು ಅತಂತ್ರಗೊಂಡಿದ್ದರು. ಕದನ ವಿರಾಮ ಘೋಷಿಸಲು ಅಮೆರಿಕ, ಈಜಿಪ್ಟ್ ಒಳಗೊಂಡು ಅಂತರರಾಷ್ಟ್ರೀಯ ಸಮುದಾಯ ಒತ್ತಡ ಹೇರಿದ್ದವು.

ಇಸ್ರೇಲ್‌ನ ದಾಳಿ ನಿಂತ ಹಿಂದೆಯೇ ಗಾಜಾ ನಗರವನ್ನು ದಟ್ಟ ಹೊಗೆ ಆವರಿಸಿದ್ದು, ಅಲ್ಲಲ್ಲಿ ಕಪ್ಪು ಹೊಗೆ ವಾತಾವರಣವನ್ನು ಸೇರುತ್ತಿತ್ತು ಎಂದು ಎಎಫ್‌ಪಿ ಪ್ರತಿನಿಧಿ ವರದಿ ಮಾಡಿದ್ದಾರೆ.

ಕದನ ವಿರಾಮ ಏರ್ಪಟ್ಟ ಹಿಂದೆಯೇ ಗಾಜಾ ನಗರದ ರಸ್ತೆಗಳಲ್ಲಿ ಸಂತಸ ಕಂಡುಬಂದಿದ್ದು, ಇದರ ಕುರುಹಾಗಿ ಕೆಲವರು ದೊಡ್ಡದಾಗಿ ಕಾರಿನ ಹಾರ್ನ್ ಹೊಮ್ಮಿಸುತ್ತಾ ತೆರಳಿದ್ದರೆ,ಕೆಲವರು ಗಾಳಿಯಲ್ಲಿ ಗುಂಡು ಹಾರಿಸಿದರು.

ಹಮಾಮ್‌ನಿಂದಲೂ ಯಾವುದೇ ರಾಕೆಟ್ ದಾಳಿ ಸಾಧ್ಯತೆ ಇಲ್ಲ. ಹೀಗಾಗಿ, ಇಸ್ರೇಲ್‌ನಲ್ಲಿಯೂ ಎಚ್ಚರಿಕೆಯ ಗಂಟೆ ಮೊಳಗಲಿಲ್ಲ. ಇಸ್ರೇಲ್‌ನಾದ್ಯಂತ ದಟ್ಟ ಮೌನ ಆವರಿಸಿತ್ತು. ಕದನ ವಿರಾಮದ ಕಾರಣ ಎರಡೂ ಕಡೆ ಸಂಘರ್ಷದ ಮಾತುಗಳನ್ನು ಹೊರಡಿಸುತ್ತಿದ್ದ ನಿವಾಸಿಗಳು ನಿಟ್ಟುಸಿರುಬಿಟ್ಟರು.

ಇದೊಂದು ಉತ್ತಮ ನಿರ್ಧಾರ. ಎರಡು ಕಡೆಯ ಜನರಿಗೆ ಏನಾಗುತ್ತಿದೆ ಎಂಬುದೇ ತಿಳಿಯುತ್ತಿರಲಿಲ್ಲ ಎಂದು ಜೆರುಸಲೆಂನ ನಿವಾಸಿಯಾಗಿರುವ ಪ್ಯಾಲೆಸ್ಟೀನಿ ನಿವಾಸಿ ಅಮ್ವಾರಾ ದಾನಾ ಪ್ರತಿಕ್ರಿಯಿಸಿದರು.

ಟೆಲ್‌ ಅವಿವ್‌ನಲ್ಲಿ ಅಲ್ಲಿನ ನಿವಾಸಿ ಅವಿತಾಲ್‌ ಫಾಸ್ಟ್ ಅವರು, ನಾನು ಈಗ ಘೋಷಿಸಿರುವ ಕದನವಿರಾಮ ಕುರಿತು ಆಶಾವಾದದಿಂದ ಇದ್ದೇನೆ. ಇದು ದೀರ್ಘಕಾಲ ಉಳಿಯಲಿದೆ ಎಂಬ ಭರವಸೆ ನನ್ನದು. ಬೆಂಕಿಯ ಭೀತಿ ಇಲ್ಲದೆಯೇ ಜೀವನವನ್ನು ಕಳೆಯಲು ನಾವು ಬಯಸುತ್ತೇವೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಉಂಟಾದ ಒತ್ತಡ ಹಿನ್ನೆಲೆಯಲ್ಲಿ ಗಾಜಾದ ಎರಡನೇ ಪ್ರಭಾವಿ ಶಸ್ತ್ರಸಜ್ಜಿತ ತಂಡವಾದ ಇಸ್ಲಾಮಿಕ್‌ ಜಿಹಾದ್ ಕದನವಿರಾಮಕ್ಕೆ ಒಪ್ಪಿಕೊಂಡಿತ್ತು.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಈ ತೀರ್ಮಾನವನ್ನು ಸ್ವಾಗತಿಸಿದ್ದು, ಇಲ್ಲಿ ಅಭಿವೃದ್ಧಿಗೆ ಉತ್ತಮ ಅವಕಾಶ ಇದೆ ಎಂದು ನಾನು ಭಾವಿಸಿದ್ದೇನೆ. ಅದಕ್ಕೆ ನಾವು ಬದ್ದರಾಗಿದ್ದೇವೆ ಎಂದು ಬೈಡನ್ ಪ್ರತಿಕ್ರಿಯಿಸಿದ್ದಾರೆ.

ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಹೇಳಿಕೆ ಬಿಡುಗೆ ಮಾಡಿದ್ದು, ಕದನ ವಿರಾಮ ಕುರಿತಂತೆ ಭದ್ರತಾ ಪಡೆಯ ಅಧಿಕಾರಿಗಳ ಶಿಫಾರಸನ್ನು ಸಂಪುಟ ಒಪ್ಪಿಕೊಂಡಿದೆಎಂದು ತಿಳಿಸಿದೆ. ಹಮಾಮ್ಸ್‌ ಮತ್ತು ಇಸ್ಲಾಮಿಸ್ಟ್‌ ಜಿಹಾದ್ ಕೂಡಾ ಕದನವಿರಾಮ ಏರ್ಪಟ್ಟಿರುವುದನ್ನು ದೃಢಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT