ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದ್ರೋಗದಿಂದ ಸಾವಿಗೀಡಾಗುತ್ತಿರುವರ ಸಂಖ್ಯೆಯಲ್ಲಿ ಹೆಚ್ಚಳ: ಡಬ್ಲ್ಯೂಎಚ್‌ಒ

Last Updated 10 ಡಿಸೆಂಬರ್ 2020, 8:09 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕಳೆದ 20 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಸಾವಿಗೆ ಪ್ರಮುಖ ಕಾರಣವಾಗಿರುವ ಹೃದ್ರೋಗವು ಈಗ ಮೊದಲಿಗಿಂತಲೂ ಹೆಚ್ಚು ಜನರನ್ನು ಬಲಿ ಪಡೆಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ) ತಿಳಿಸಿದೆ.

ಮಧುಮೇಹ ಮತ್ತುಡೆಮೆನ್ಷಿಯಾ (ಮರೆಗುಳಿತನ) ಕೂಡ ವಿಶ್ವದಲ್ಲಿ ಸಾವಿನ ಪ್ರಮುಖ 10 ಕಾರಣಗಳಲ್ಲಿ ಒಂದಾಗಿದೆ ಎಂದು ಡಬ್ಲ್ಯೂಎಚ್‌ಒ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯು 2019ರ ಜಾಗತಿಕ ಆರೋಗ್ಯ ಅಂದಾಜುಗಳನ್ನು ಬುಧವಾರ ಬಿಡುಗಡೆಗೊಳಿಸಿದೆ. ಇದರಲ್ಲಿ ವಿಶ್ವದಲ್ಲಿ ಸಾವಿನ ಪ್ರಮುಖ 10 ಕಾರಣಗಳಲ್ಲಿ ಸಾಂಕ್ರಾಮಿಕವಲ್ಲದ ಏಳು ರೋಗಗಳಿವೆ. 2000ರಲ್ಲಿ ಈ ಪಟ್ಟಿಯಲ್ಲಿ ಕೇವಲ ನಾಲ್ಕು ಸಾಂಕ್ರಾಮಿಕವಲ್ಲದ ರೋಗಗಳಿದ್ದವು. ಹೊಸ ದತ್ತಾಂಶವು 2000 ರಿಂದ 2019ರ ಅವಧಿಯನ್ನು ಒಳಗೊಂಡಿದೆ.

ಕಳೆದ 20 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಸಾವಿಗೆ ಪ್ರಮುಖ ಕಾರಣವಾಗಿರುವ ಹೃದ್ರೋಗವು ಹಿಂದಿಗಿಂತಲೂ ಹೆಚ್ಚಿನ ಜನರನ್ನು ಕೊಲ್ಲುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪ್ರಸ್ತುತ ಶೇಕಡ 16ರಷ್ಟು ಮಂದಿ ಹೃದ್ರೋಗದಿಂದ ಸಾವಿಗೀಡಾಗುತ್ತಿದ್ದಾರೆ. 2000ನೇ ಇಸ್ವಿಯಿಂದ ಹೃದ್ರೋಗದಿಂದ ಸಾವಿಗೀಡಾಗುವವರ ಸಂಖ್ಯೆ 20ಲಕ್ಷಕ್ಕಿಂತಲೂ ಹೆಚ್ಚಾಗಿದ್ದು, 2019ರಲ್ಲಿ 90 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಮಧುಮೇಹ ಮತ್ತು ಡೆಮೆನ್ಷಿಯಾ ವಿಶ್ವದ ಪ್ರಮುಖ 10 ಸಾವಿನ ಕಾರಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ಅಲ್ಜಮೈರ್ ಮತ್ತು ಡೆಮೆನ್ಷಿಯಾಗೆ ಸಂಬಂಧಿತ ಇತರ ರೋಗಗಳು ಕೂಡ ವಿಶ್ವದ ಪ್ರಮುಖ 10 ಸಾವಿನ ಕಾರಣಗಳಲ್ಲಿ ಒಂದಾಗಿದ್ದು, ಇದು 2019ರ ವೇಳೆಗೆ ಅಮೆರಿಕ ಮತ್ತು ಯುರೋಪ್‌ನಲ್ಲಿ ಮೂರನೇ ಸ್ಥಾನ ಪಡೆದಿದೆ. ಅಲ್ಜಮೈರ್‌ ಮತ್ತು ಬುದ್ಧಿಮಾಂದ್ಯತೆ ಸಂಬಂಧಿತ ರೋಗದಿಂದ ಜಾಗತಿಕವಾಗಿ ಶೇಕಡ 65 ರಷ್ಟು ಮಹಿಳೆಯರು ಮೃತಪಟ್ಟಿದ್ದಾರೆ.

2000 ಮತ್ತು 2019 ರ ನಡುವೆ ಜಾಗತಿಕವಾಗಿ ಮಧುಮೇಹದಿಂದ ಸಾವಿಗೀಡಾಗಿರುವವರ ಸಂಖ್ಯೆ ಶೇಕಡಾ 70 ರಷ್ಟು ಏರಿಕೆಯಾಗಿದ್ದು, ಇದರಲ್ಲಿ ಪುರುಷರ ಸಾವಿನ ಸಂಖ್ಯೆಯು ಶೇಕಡ 80ರಷ್ಟು ಹೆಚ್ಚಿದೆ. ಪೂರ್ವ ಮೆಡಿಟರೇನಿಯನ್‌ನಲ್ಲಿ ಮಧುಮೇಹದಿಂದ ಸಾವುಗಳು ಸಂಖ್ಯೆಯೂ ದ್ವಿಗುಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT