ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪಮಾನ ಹೆಚ್ಚಳ: ಚೀನಾ, ಸ್ಪೇನ್, ಬ್ರಿಟನ್‌ನಲ್ಲಿ ಜನರ ಪರದಾಟ

Last Updated 13 ಜುಲೈ 2022, 7:30 IST
ಅಕ್ಷರ ಗಾತ್ರ

ಮ್ಯಾಡ್ರಿಡ್‌/ಬೀಜಿಂಗ್: ಯುರೋಪ್‌ನ ಹಲವು ರಾಷ್ಟ್ರಗಳು ಹಾಗೂ ಚೀನಾದ 10ಕ್ಕೂ ಹೆಚ್ಚು ನಗರಗಳಲ್ಲಿ ಅಧಿಕ ತಾಪಮಾನ ದಾಖಲಾಗಿದ್ದು, ಜನರು ಪರದಾಡುವಂತಾಗಿದೆ.

ಚೀನಾದ ವಾಣಿಜ್ಯನಗರಿ ಶಾಂಘೈ ಸೇರಿದಂತೆ ಹಲವು ನಗರಗಳಲ್ಲಿ ಬಿಸಿಲಿನ ತಾಪದಿಂದ ಬಳಲಿದ ಜನರು ತಂಪು ಪ್ರದೇಶಗಳತ್ತ ಮುಖ ಮಾಡಿದ್ದಾರೆ. ಬಿಸಿಲಿನ ಝಳದಿಂದಾಗಿ ರಸ್ತೆಗಳು, ಚಾವಣಿಗಳು ಕಾದ ಕಾವಲಿಯಂತಾಗಿದ್ದು, ಜನರು ನಿಟ್ಟುಸಿರು ಬಿಡುತ್ತಿದ್ದಾರೆ.

ಶಾಂಘೈ ಸೇರಿದಂತೆ 86 ನಗರಗಳಲ್ಲಿ ಮಂಗಳವಾರ ‘ರೆಡ್‌ ಅಲರ್ಟ್‌’ ಘೋಷಿಸಲಾಗಿತ್ತು. ಮುಂದಿನ 24 ಗಂಟೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಲಿದೆ ಎಂದು ಎಚ್ಚರಿಸಲಾಗಿದೆ. ಅಲ್ಲದೇ, ಕಟ್ಟಡ ನಿರ್ಮಾಣ ಸೇರಿದಂತೆ ಹೊರಗಡೆ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

ಸ್ಪೇನ್, ಪೋರ್ಚುಗಲ್ ಸೇರಿದಂತೆ ಯುರೋಪ್‌ನ ಕೆಲ ರಾಷ್ಟ್ರಗಳಲ್ಲಿಯೂ ಜನರು ಬಿಸಿಲಿನ ಝಳಕ್ಕೆ ಬಸವಳಿದಿದ್ದಾರೆ. ಬರುವ ದಿನಗಳಲ್ಲಿ ಫ್ರಾನ್ಸ್‌ ಹಾಗೂ ಬ್ರಿಟನ್‌ನಲ್ಲಿ ತಾಪಮಾನ ಇನ್ನಷ್ಟು ಹೆಚ್ಚಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕ್ಯಾಂಡೆಲಿಡಾ ಪಟ್ಟಣದಲ್ಲಿ ಗರಿಷ್ಠ 43.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಸ್ಪೇನ್‌ನ ಹವಾಮಾನ ಸಂಸ್ಥೆ ಎಇಎಂಇಟಿ ತಿಳಿಸಿದೆ.

‘ತಾಪಮಾನದಲ್ಲಿನ ಹೆಚ್ಚಳ ಕಳೆದ ಭಾನುವಾರದಿಂದ ಕಂಡುಬಂದಿದೆ. ಈ ವಿದ್ಯಮಾನ ಮುಂದಿನ 9–10 ದಿನಗಳ ಕಾಲ ಇರಲಿದೆ’ ಎಂದು ಎಇಎಂಇಟಿ ವಕ್ತಾರ ರುಬೆನ್ ಡಿಕ್ಯಾಂಪೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT