ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲಂಬಿಯಾ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ದಾಳಿ

Last Updated 26 ಜೂನ್ 2021, 6:34 IST
ಅಕ್ಷರ ಗಾತ್ರ

ಬುಕರಮಂಗ: ಕೊಲಂಬಿಯಾ ಅಧ್ಯಕ್ಷ ಇವಾನ್ ಡ್ಯುಕ್‌ ಹಾಗೂ ಕೆಲ ಸಚಿವರು, ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಮೇಲೆವೆನೆಜುವೆಲಾ ಗಡಿ ಬಳಿಯ ದಕ್ಷಿಣ ಕ್ಯಾಟಟಂಬೊ ಪ್ರದೇಶದಲ್ಲಿ ದಾಳಿ ನಡೆದಿದೆ. ಈ ಬಗ್ಗೆ ಅಧ್ಯಕ್ಷರು ಸ್ವತಃ ಮಾಹಿತಿ ನೀಡಿದ್ದಾರೆ.

‘ಹೆಲಿಕಾಪ್ಟರ್‌ನಲ್ಲಿ ನನ್ನ ಜತೆಗಿದ್ದ ರಕ್ಷಣಾ ಸಚಿವ ಡಿಯಾಗೊ ಮೊಲಾನೊ, ಒಳಾಡಳಿತ ಸಚಿವ ಡೇನಿಯಲ್ ಪಲಾಸಿಯೊಸ್ ಸೇರಿದಂತೆ ಎಲ್ಲರೂ ಸುರಕ್ಷಿತರಾಗಿದ್ದೇವೆ’ ಎಂದು ಅಧ್ಯಕ್ಷ ಇವನ್‌ ಡ್ಯುಕ್‌ ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಹಿಂತಿರುಗುತ್ತಿದ್ದ ವೇಳೆ ಹೆಲಿಕಾಫ್ಟರ್‌ ಮೇಲೆ ಗುಂಡಿನ ದಾಳಿ ನಡೆದಿದೆ. ಇದರಿಂದಾಗಿ ಹೆಲಿಕಾಫ್ಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು ಎಂದು ಅವರು ವಿವರಿಸಿದ್ದಾರೆ.

ಹೆಲಿಕಾಪ್ಟರ್‌ನಲ್ಲಿ ಅಳವಡಿಸಲಾಗಿದ್ದ ಸಾಧನಗಳು ಮತ್ತು ಅದರ ಸಾಮರ್ಥ್ಯವು ದೊಡ್ಡ ಅಪಾಯವನ್ನು ತಡೆದಿದೆ ಎಂದಿರುವ ಅವರು, ಗುಂಡಿನ ದಾಳಿಯಿಂದ ಹೆಲಿಕಾಪ್ಟರ್‌ಗೆ ಆಗಿರುವ ಹಾನಿಯ ಕುರಿತ ವಿಡಿಯೊವೊಂದನ್ನು ಬಿಡುಗಡೆಗೊಳಿಸಿದ್ದಾರೆ.

ಈ ದಾಳಿ ಎಷ್ಟು ಹೊತ್ತಿಗೆ ನಡೆದಿದೆ ಎಂಬುದರ ಬಗ್ಗೆಅಧ್ಯಕ್ಷರು ಮಾಹಿತಿ ನೀಡಿಲ್ಲ. ಅಲ್ಲದೆ ಅವರು ಯಾವ ಸಂಘಟನೆಯ ಮೇಲೆಯೂ ಶಂಕೆ ವ್ಯಕ್ತಪಡಿಸಿಲ್ಲ.

‘ಈ ರೀತಿಯ ಹೇಡಿತನದ ಕೃತ್ಯದಿಂದ ಮಾದಕ ವಸ್ತುಗಳ ಜಾಲ, ಭಯೋತ್ಫಾದನೆ ಮತ್ತು ಇತರ ಅಪರಾಧಗಳ ವಿರುದ್ಧದ ನನ್ನ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ. ಬೆದರಿಕೆಗಳನ್ನು ಮೀರಿ ಅಪರಾಧಗಳನ್ನು ಎದುರಿಸುವ ಸಾಮರ್ಥ್ಯ ಕೊಲಂಬಿಯಾಗೆ ಇದೆ’ ಎಂದು ಇವಾನ್‌ ಡ್ಯುಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT