ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಅಪಹರಣ ಪ್ರಕರಣ: ಪೋಷಕರೊಂದಿಗೆ ಆಕೆಯನ್ನು ಕಳುಹಿಸಲು ಪಾಕ್‌ ಕೋರ್ಟ್‌ ನಕಾರ

Last Updated 27 ಅಕ್ಟೋಬರ್ 2022, 16:22 IST
ಅಕ್ಷರ ಗಾತ್ರ

ಕರಾಚಿ: ಅಪಹರಣಕಾರನೊಬ್ಬ ಹುಡುಗಿಯೊಬ್ಬಳನ್ನು ಅಪಹರಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಆಕೆಯನ್ನು ವಿವಾಹವಾಗಿದ್ದಾನೆ. ಈ ಸಂದರ್ಭದಲ್ಲಿ ಆಕೆ ಅಪ್ರಾಪ್ತಳಾಗಿದ್ದಳು ಎನ್ನುವುದು ವೈದ್ಯಕೀಯ ಪರೀಕ್ಷೆಯಲ್ಲಿಸಾಬೀತಾಗಿದ್ದರೂ, ಹಿಂದೂ ಬಾಲಕಿಯನ್ನು ಬಾಲಮಂದಿರದಿಂದ ಪೋಷಕರ ಜೊತೆ ಕಳುಹಿಸಲು ಪಾಕಿಸ್ತಾನದ ನ್ಯಾಯಾಲಯವೊಂದು ನಿರಾಕರಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅ.31ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೂ ಬಾಲಕಿ ಬಾಲಮಂದಿರದಲ್ಲಿಯೇ ಇರಬೇಕು ಎಂದು ಸೂಚಿಸಿದೆ.

ಏನಿದು ಪ್ರಕರಣ:ಸಹೋದರಿಯೊಂದಿಗೆ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯನ್ನು ಆ.12ರಂದು ಹೈದರಾಬಾದ್‌ ನಗರದ ಸಿಂಧ್‌ನಿಂದ ಅಪಹರಿಸಲಾಗಿತ್ತು. ಬಳಿಕ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಅಪಹರಣಕಾರನೇ ವಿವಾಹವಾಗಿದ್ದ.ಪೊಲೀಸರು ಮತ್ತು ಮಾನವ ಹಕ್ಕುಗಳ ಅಧಿಕಾರಿಗಳು ಬಾಲಕಿಯನ್ನು ಪತ್ತೆ ಹಚ್ಚಿ ಬಾಲಮಂದಿರದಲ್ಲಿ ಆಕೆಗೆ ಆಶ್ರಯ ಕಲ್ಪಿಸಿದ್ದರು.

ಈ ಮಧ್ಯೆ ಬಾಲಕಿಯ ಪತಿ ಎಂದು ಹೇಳಲಾದ ವ್ಯಕ್ತಿ ಬಾಲಕಿಯ ಪೋಷಕರ ವಿರುದ್ಧವೇ ದೂರು ದಾಖಲಿಸಿದ್ದ. ಆತ ಸಲ್ಲಿಸಿದ್ದ ವಿವಾಹ ಪ್ರಮಾಣ ಪತ್ರದಲ್ಲಿ ಬಾಲಕಿಗೆ 19 ವರ್ಷ ವಯಸ್ಸು ಎಂದು ದೃಢೀಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ ಬಾಲಕಿಯ ವಯಸ್ಸನ್ನು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸೂಚಿಸಿತ್ತು. ವೈದ್ಯಕೀಯ ಪರೀಕ್ಷೆ ವೇಳೆ ಆಕೆಗೆ 16 ವರ್ಷ ಎಂದು ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT