ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗತಿಕ ಹಿಂದುತ್ವ ವಿಸರ್ಜನೆ‘ ಸಮ್ಮೇಳನ ಬೆಂಬಲಿಸದಂತೆ ಅಮೆರಿಕ ವಿವಿಗಳಿಗೆ ಒತ್ತಾಯ

ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಅಮೆರಿಕದ ಹಿಂದೂ ಸಂಘಟನೆಗಳ ಆಗ್ರಹ
Last Updated 21 ಆಗಸ್ಟ್ 2021, 6:47 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಮುಂದಿನ ತಿಂಗಳು ಆನ್‌ಲೈನ್‌ನಲ್ಲಿ ನಡೆಯಲಿರುವ ‘ಜಾಗತಿಕ ಹಿಂದುತ್ವ ವಿಸರ್ಜನೆ(ಡಿಜಿಎಚ್‌–ಡಿಸ್‌ಮ್ಯಾಂಟಲಿಂಗ್‌ ಗ್ಲೋಬಲ್ ಹಿಂದುತ್ವ)‘ ಸಮ್ಮೇಳನವನ್ನು ಬೆಂಬಲಿಸದಂತೆ ಇಲ್ಲಿನ ಪ್ರಮುಖ ಹಿಂದೂ ಸಮುದಾಯವೊಂದು ಅಮೆರಿಕದಾದ್ಯಂತವಿರುವ ಹಲವು ವಿಶ್ವವಿದ್ಯಾಲಯಗಳನ್ನು ಆಗ್ರಹಿಸಿದೆ.

ಸೆಪ್ಟೆಂಬರ್‌ 10ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು 40 ವಿಶ್ವವಿದ್ಯಾಲಯಗಳ 45 ಕೇಂದ್ರಗಳು ಅಥವಾ ವಿಭಾಗಗಳು ಸಹ ಪ್ರಾಯೋಜಿಸುತ್ತಿವೆ. ಇವುಗಳಲ್ಲಿ ಹೆಚ್ಚಿನವು ಅಮೆರಿಕದ ವಿಶ್ವವಿದ್ಯಾಲಯಗಳಾಗಿವೆ ಎಂದು ಹೆಸರು ಹೇಳಲಿಚ್ಛಿಸದ ಸಮ್ಮೇಳನದ ಸಂಘಟಕರೊಬ್ಬರು ಮಾಹಿತಿ ನೀಡಿದ್ದಾರೆ.

ಭಾರತ ಮತ್ತು ವಿಶ್ವದ ಇತರೆ ಭಾಗಗಳಲ್ಲಿ ಹಿಂದೂ ಸಿದ್ಧಾಂತದ ಪ್ರಾಬಲ್ಯದ ಅನ್ವೇಷಣೆಯ ಗುರಿಯೊಂದಿಗೆ ಈ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಕಾರ್ಯಕ್ರಮದ ಜಾಲತಾಣದಲ್ಲಿ ಉಲ್ಲೇಖಿಸಲಾಗಿದೆ. ಸಮ್ಮೇಳನದ ಈ ಉದ್ದೇಶವನ್ನು ಅಮೆರಿಕ ದಲ್ಲಿರುವ ವಿವಿಧ ಹಿಂದೂ ಸಮುದಾಯದ ಗುಂಪುಗಳು ವಿರೋಧಿಸಿವೆ.

ಭಾರತ ಮತ್ತು ಅಮೆರಿದಲ್ಲಿ ವಿವಿಧ ಹಿಂದೂ ಸಂಘಟನೆಗಳ ವಿರುದ್ಧ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವವರೇ ಸಮ್ಮೇಳನದಲ್ಲಿ ಭಾಷಣಕಾರರಾಗಿದ್ದಾರೆ ಎಂದು ಈ ಗುಂಪು ತಿಳಿಸಿದೆ.

ಸಮ್ಮೇಳನವನ್ನು ಬೆಂಬಲಿಸದಂತೆ ಒತ್ತಾಯಿಸಿ ವಿವಿಧ ವಿಶ್ವವಿದ್ಯಾಲಯಗಳಿಗೆ ಇ–ಮೇಲ್ ಮಾಡಿರುವ ಹಿಂದು ಅಮೆರಿಕನ್ ಫೌಂಡೇಷನ್‌(ಎಚ್‌ಎಎಫ್‌), ‘ಡಿಜಿಎಚ್‌ ಸಮ್ಮೇಳನದ ಸಂಘಟಕರು, ನಿಮ್ಮ ವಿಶ್ವವಿದ್ಯಾಲಯದ ಹೆಸರನ್ನು ಬಳಸಿಕೊಂಡು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ. ಇದು ಶೈಕ್ಷಣಿಕ ಸಮ್ಮೇಳನವಲ್ಲ, ಆದರೆ, ಭಾರತದ ರಾಜಕೀಯ ಪಕ್ಷಕ್ಕೆ ಸೇರಿದಂತಹ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿರುವ ಚಳವಳಿಕಾರರು, ಭಾಷಣಕಾರರು ಹಿಂದುತ್ವದ ಬಗೆಗಿರುವ ಗೌರವವನ್ನು ನಿರಾಕರಿಸುತ್ತಲೇ, ಹಿಂದುತ್ವದ ಬಗ್ಗೆ ‌ಭಯ ಹುಟ್ಟಿಸುತ್ತಾರೆ‘ ಎಂದು ತಿಳಿಸಿದ್ದಾರೆ.

ಎಚ್‌ಎಎಸ್‌ ಪ್ರಕಾರ, ಬಾಸ್ಟನ್‌ನಲ್ಲಿರುವ ಮ್ಯಾಸಚ್ಯುಸೆಟ್ಸ್‌ ವಿಶ್ವವಿದ್ಯಾಲಯ ಮತ್ತು ಡಾಲ್‌ಹೌಸಿ ವಿಶ್ವವಿದ್ಯಾಲಯಗಳು ಸಮ್ಮೇಳನದ ಪ್ರಾಯೋಜನೆಯಿಂದ ಹಿಂದೆ ಸರಿದಿವೆ.

ಜಾಗತಿಕ ಹಿಂದುತ್ವ ವಿಸರ್ಜನೆ ಸಮ್ಮೇಳನದ ಸಂಘಟಕರು ‘ನಮ್ಮದು ಸ್ವಯಂ ಸೇವಕರ ಗುಂಪಾಗಿದ್ದು, ತಾವು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ‘ ಎಂದು ಸುದ್ದಿಸಂಸ್ಥೆಗೆ ಇಮೇಲ್ ಮೂಲಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT