ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸುಪ್ರೀಂಕೋರ್ಟ್‌ಗೆ ಮೊದಲ ಕಪ್ಪುವರ್ಣೀಯ ಮಹಿಳಾ ನ್ಯಾಯಮೂರ್ತಿ ನೇಮಕ

Last Updated 7 ಏಪ್ರಿಲ್ 2022, 20:39 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಕೆತಂಜಿ ಬ್ರೌನ್ ಜಾಕ್ಸನ್‌ ಅವರ ನೇಮಕವನ್ನು ಸೆನೆಟ್‌ ಗುರುವಾರ ದೃಢೀಕರಿಸಿದೆ.

ಇವರು ಅಮೆರಿಕದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಮೊದಲ ಕಪ್ಪುವರ್ಣೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಾಕ್ಸನ್ ಅವರನ್ನು ನ್ಯಾಯಮೂರ್ತಿ ಹುದ್ದೆಗೆ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದರು. ಸೆನೆಟ್ ಸದಸ್ಯರು ಈ ನಾಮನಿರ್ದೇಶನದ ಪರ ಮತ ಚಲಾಯಿಸುವ ಮೂಲಕ ಜಾಕ್ಸನ್‌ ಅವರ ನೇಮಕಾತಿಯನ್ನು ದೃಢೀಕರಿಸಿದರು.

ಈ ವರೆಗೆ 115 ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್‌ನಲ್ಲಿಕರ್ತವ್ಯ ನಿರ್ವಹಿಸಿದ್ದು, ಈ ಪೈಕಿ 17 ಮಂದಿ ಮುಖ್ಯನ್ಯಾಯಮೂರ್ತಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT