ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದಲ್ಲಿ ಬ್ರಿಟನ್‌ಗೆ ಹೊಸ ಪ್ರಧಾನಿ: ಮುಂಚೂಣಿಯಲ್ಲಿ ಬೋರಿಸ್ – ಸುನಕ್‌ 

ಕನ್ಸೆರ್ವೇಟಿವ್ ಪಕ್ಷದ ಹೊಸ ನಾಯಕನ ಆಯ್ಕೆಗೆ ಚುನಾವಣಾ ಪ್ರಕ್ರಿಯೆ ಶುರು
Last Updated 21 ಅಕ್ಟೋಬರ್ 2022, 15:52 IST
ಅಕ್ಷರ ಗಾತ್ರ

ಲಂಡನ್‌ (ಎಎಫ್‌ಪಿ/ಎಪಿ/ರಾಯಿಟರ್ಸ್‌): ಬ್ರಿಟನ್‌ ಪ್ರಧಾನಿ ಲಿಜ್‌ ಟ್ರಸ್‌ ಅವರ ರಾಜೀನಾಮೆಯಿಂದ ತೆರವಾಗಲಿರುವ ಸ್ಥಾನಕ್ಕೆ ಒಂದು ವಾರದೊಳಗೆ ಚುನಾವಣೆ ನಡೆಯಲಿದೆ. ಕನ್ಸರ್ವೇಟಿವ್‌ (ಟೋರಿ) ಪಕ್ಷದ ಸಂಸದರು ವರ್ಷದಲ್ಲಿ ಎರಡನೇ ಸಲ ತಮ್ಮ ಹೊಸ ನಾಯಕರನ್ನು ಆಯ್ಕೆ ಮಾಡಲಿದ್ದಾರೆ.

ಪ್ರಧಾನಿ ಸ್ಥಾನದ ಆಕಾಂಕ್ಷಿಗಳಾಗಿಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಮತ್ತು ಮಾಜಿ ಹಣಕಾಸು ಸಚಿವ ರಿಷಿ ಸುನಕ್‌ ಅವರ ಹೆಸರು ಮುಂಚೂಣಿಯಲ್ಲಿದೆ. ತ್ವರಿತಗತಿಯಲ್ಲಿ ನಡೆಯಲಿರುವ ಈ ಚುನಾವಣೆಯಲ್ಲಿ ಸಂಸದರು ಮತ್ತು ಪಕ್ಷದ ಸದಸ್ಯರ ವಿಶ್ವಾಸ ಗಳಿಸಲು ಸಂಭವನೀಯ ಅಭ್ಯರ್ಥಿಗಳು ಈಗಾಗಲೇ ತುರುಸಿನ ಪ್ರಚಾರ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೇವಲ ಮೂರು ತಿಂಗಳ ಹಿಂದೆಯಷ್ಟೇ ಹುದ್ದೆ ತ್ಯಜಿಸಿದ್ದ ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್‌ಅಸಾಧಾರಣ ರೀತಿಯಲ್ಲಿ ಪುನರಾಗಮನ ಮಾಡಲು ಎದುರು ನೋಡುತ್ತಿದ್ದಾರೆ. ಮುಂದಿನ ಪ್ರಧಾನಿ ಕಿರೀಟ ಅಲಂಕರಿಸಲು ಪ್ರತಿಸ್ಪರ್ಧಿ, ಭಾರತೀಯ ಮೂಲದ ರಿಷಿ ಸುನಕ್‌ ಅವರಿಗಿಂತ ಹೆಚ್ಚು ಶ್ರೇಯಾಂಕ ಗಿಟ್ಟಿಸುವ ಕಸರತ್ತನ್ನು ಆರಂಭಿಸಿದ್ದಾರೆ.

‘ಪರಿಸ್ಥಿತಿಯನ್ನು ತನ್ನ ಪರವಾಗಿಸಿಕೊಳ್ಳುವುದನ್ನು ಬೋರಿಸ್‌ ಜಾನ್ಸನ್‌ ಕರಗತ ಮಾಡಿಕೊಂಡಿದ್ದಾರೆ. ಈ ಬಾರಿಯೂ ಅವರು ಆ ರೀತಿಯೇ ಮಾಡಲಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ಜಾನ್ಸನ್‌ ಗೆಲ್ಲಬಹುದು’ ಎಂದು ಟೋರಿ ಸಂಸದ ಪೌಲ್‌ ಬ್ರಿಸ್ಟೌ ಎಲ್‌ಬಿಸಿ ರೇಡಿಯೊಗೆ ತಿಳಿಸಿದ್ದಾರೆ.

ಪ್ರಧಾನಿ ಚುನಾವಣೆಯಲ್ಲಿ ಬೋರಿಸ್‌ಜಾನ್ಸನ್, ರಿಷಿ ಸುನಕ್ ಹಾಗೂ ಪೆನ್ನಿ ಮೊರ್ಡಾಂಟ್ ಅವರ ನಡುವೆ ಸ್ಪರ್ಧೆ ಏರ್ಪಡುವ ನಿರೀಕ್ಷೆ ಇದೆ. ಚುನಾವಣಾ ಪ್ರಕ್ರಿಯೆ ಶುಕ್ರವಾರವೇ ಶುರುವಾಗಿದ್ದು,ವಿಜೇತರು ಯಾರೆನ್ನುವ ಫಲಿತಾಂಶ ಬರುವ ಸೋಮವಾರ ಅಥವಾ ಶುಕ್ರವಾರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT