ಗುರುವಾರ , ಅಕ್ಟೋಬರ್ 1, 2020
22 °C

ಬ್ರಿಟನ್‌ ಪ್ರಧಾನಿಯಾಗುವ ಕನಸು ಕಂಡಿಲ್ಲ ಎಂದ ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವ ಕನಸನ್ನು ನಾನು ಕಂಡಿಲ್ಲ ಎಂದು ಇನ್ಫೋಸಿಸ್‌ ನಾರಾಯಣಮೂರ್ತಿ ದಂಪತಿಯ ಅಳಿಯ, ಬ್ರಿಟನ್‌ ಹಣಕಾಸು ಸಚಿವ ರಿಷಿ ಸುನಕ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಎಲೆಮರೆಯಲ್ಲೇ ಬೆಳಗಿದ ರಿಷಿ ಸುನಕ್‌

ಟೈಮ್‌ ರೇಡಿಯೋ ವರದಿಗಾರರೊಬ್ಬರ ಜೊತೆಗೆ ಬ್ರಿಟನ್‌ನ ಹಣಕಾಸು ಸಚಿವ ರಿಷಿ ಸುನಕ್‌ ಶನಿವಾರ ಮಾತನಾಡುತ್ತಿದ್ದರು. ಈ ವೇಳೆ ವರದಿಗಾರ, ‘ನೀವು ಬಳಲಿದಂತೆ ಕಾಣುತ್ತಿದ್ದೀರಿ. ಬ್ರಿಟನ್‌ನ ಮುಂದಿನ ಪ್ರಧಾನಿಯಾಗುವ ನಿಮ್ಮ ಆಸೆಯನ್ನು ಕೊರೊನಾ ವೈರಸ್‌ ಬಿಕ್ಕಟ್ಟು ತಡೆದಿದೆಯೇ?’ ಎಂದು ಪ್ರಶ್ನಿಸಿದರು. ವರದಿಗಾರನ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಓ... ನಾನು ಅಂಥ ಕನಸನ್ನೇ ಕಂಡಿಲ್ಲ,’ ಎಂದು ಹೇಳಿದ್ದಾರೆ.

ಆದರೆ, ಕೊರೊನಾ ವೈರಸ್‌ ಬಿಕ್ಕಟ್ಟು ಸೃಷ್ಟಿಯಾದ ಮೇಲೆ ತಾವು ಬಿಡುವಿಲ್ಲದ ಕೆಲಸದಲ್ಲಿ ನಿರತವಾಗಿರುವುದಾಗಿಯೂ, ಇದರಿಂದ ತಾವು ದಣಿದಿರುವುದಾಗಿ ಹೇಳಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗ ಸೃಷ್ಟಿಸಿದ ಸಂದಿಗ್ಧ ಪರಿಸ್ಥಿತಿಯ ಕಾರಣದಿಂದ ತಾವು ಕುಟುಂಬಸ್ಥರನ್ನು ಸರಿಯಾಗಿ ನೋಡಲೂ ಆಗುತ್ತಿಲ್ಲ, ಜಿಮ್‌ಗೆ ಹೋಗಲೂ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ನಿಭಾಯಿಸಲು ಸುನಕ್‌ ನೂರಾರು ಶತಕೋಟಿ ಪೌಂಡ್‌ಗಳ ಆರ್ಥಿಕ ಪುನಶ್ಚೇತನ ಕ್ರಮಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಸುನಕ್‌ ಮುಂದೆ ಒಂದು ದಿನ ಪ್ರಧಾನಿ ಬೋರಿಸ್‌ ಜಾನ್ಸ್‌ನ್‌ ಅವರ ಜಾಗ ಅಲಂಕರಿಸುವ ಸಾಧ್ಯತೆಗಳಿವೆ ಎಂಬ ವ್ಯಾಖ್ಯಾನಗಳು ಬ್ರಿಟನ್‌ನಲ್ಲಿ ಕೇಳಿ ಬರುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು