ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ ಏರ್‌ ಶೋನಲ್ಲಿ ಶಕ್ತಿ ಪ್ರದರ್ಶಿಸಲಿದೆ ತೇಜಸ್‌

ಫೆ.15ರಿಂದ 18 ರ ವರೆಗೆ ಏರ್‌ ಶೋ
Last Updated 7 ಫೆಬ್ರುವರಿ 2022, 14:44 IST
ಅಕ್ಷರ ಗಾತ್ರ

ಸಿಂಗಪುರ (ಪಿಟಿಐ): ಇಲ್ಲಿ ಫೆ.15ರಿಂದ 18ರ ವರೆಗೆ ನಡೆಯಲಿರುವ ಸಿಂಗಪುರ ಏರ್‌ ಶೋ ನಲ್ಲಿ ಭಾರತೀಯ ವಾಯುಪಡೆಯಲಘು ಯುದ್ಧ ವಿಮಾನ ತೇಜಸ್‌ ತನ್ನ ಶಕ್ತಿಪ್ರದರ್ಶನ ಮಾಡಲಿದೆ.

ಸಿಂಗಪುರದ ಆಗಸದಲ್ಲಿ ತೇಜಸ್‌ ತನ್ನ ಕೌಶಲ ಮತ್ತು ವಿವಿಧ ಸಾಹಸಗಳನ್ನು ಪ್ರದರ್ಶಿಸಲಿದೆ. ಭಾರತ, ಅಮೆರಿಕ, ಇಂಡೋನೇಷ್ಯಾ ಮತ್ತು ಸಿಂಗಪುರ ವಾಯುಪಡೆಗಳ ಯುದ್ಧವಿಮಾನಗಳು ಹಾಗೂ ಎರಡು ವಾಣಿಜ್ಯ ವಿಮಾನಯಾನ ಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಜತೆಗೆ 600ಕ್ಕೂ ಹೆಚ್ಚುಕಂಪನಿಗಳು ಭಾಗವಹಿಸಲಿವೆ ಎಂದು ಏರ್ ಶೋ ಆಯೋಜಕರಾದ ಏಕ್ಸ್‌ಪಿರಿಯಾ ಸಂಸ್ಥೆ ಸೋಮವಾರ ತಿಳಿಸಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ದುಬೈನಲ್ಲಿ ನಡೆದ ಏರ್‌ ಶೋನಲ್ಲಿ ತೇಜಸ್‌ ಭಾಗವಹಿಸಿ ತನ್ನ ಸಾಮರ್ಥ್ಯ ಪ್ರದರ್ಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT