ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಮೇಲೆ ದಾಳಿ: ರಷ್ಯಾದಲ್ಲಿ ವ್ಯವಹಾರ ಸ್ಥಗಿತಗೊಳಿಸಿದ ಐಬಿಎಂ

Last Updated 8 ಮಾರ್ಚ್ 2022, 2:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ತಂತ್ರಜ್ಞಾನ ವಲಯದ ಬಹುರಾಷ್ಟ್ರೀಯ ಕಂಪನಿ ಐಬಿಎಂ ರಷ್ಯಾದೊಂದಿಗೆ ತನ್ನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ. ಉಕ್ರೇನ್‌ ಮತ್ತು ರಷ್ಯಾ ನಡುವಿನ ಸಂಘರ್ಷದ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಕಂಪನಿಯ ಸಿಇಒ ಅರವಿಂದ್ ಕೃಷ್ಣ ಹೇಳಿದ್ದಾರೆ.

'ಉಕ್ರೇನ್‌ನಲ್ಲಿ ಯುದ್ಧಕ್ಕೆ ಸಂಬಂಧಿಸಿದಂತೆ ಕಳೆದ ವಾರದಿಂದ ಹಲವರಿಂದ ಪ್ರತಿಕ್ರಿಯೆಗಳನ್ನು ಪಡೆದಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ನಾವು ರಷ್ಯಾದಲ್ಲಿ ನಮ್ಮ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದೇವೆ. ಆ ಭಾಗದಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ಎಲ್ಲ ರೀತಿಯಲ್ಲೂ ಅಗತ್ಯ ಬೆಂಬಲ ನೀಡಿರುವುದರ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇನೆ,' ಎಂದು ಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಬಿಎಂ ಕಂಪನಿಯು ಜೆಕ್‌ ಮತ್ತು ಪೋಲೆಂಡ್‌ನ ಜನೋಪಕಾರಿ ಸಂಘಟನೆಗಳಿಗೆ 5,00,000 ಡಾಲರ್‌ ನೆರವು ನೀಡುತ್ತಿದೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಆರಂಭಿಸುತ್ತಿದ್ದಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳು, ಮಾಧ್ಯಮ ಸಂಸ್ಥೆಗಳು ಹಾಗೂ ಬೃಹತ್‌ ವಹಿವಾಟು ನಡೆಸುವ ಕಂಪನಿಗಳು ರಷ್ಯಾ ತೊರೆಯುವುದನ್ನು ಪ್ರಕಟಿಸಿವೆ. ಇನ್ನೂ ಕೆಲವು ಕಂಪನಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ಪೂರ್ವ ಉಕ್ರೇನ್‌ನಲ್ಲಿ ಸಾರ್ವಜನಿಕರನ್ನು ರಕ್ಷಿಸಲು ಮಿಲಿಟರಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಷ್ಯಾ ಹೇಳಿಕೊಂಡಿದೆ.

ರಷ್ಯಾದೊಂದಿಗೆ ಅಂತರ ಕಾಯ್ದುಕೊಂಡಿರುವ ಕಂಪನಿಗಳಲ್ಲಿ ಕೆಲವು....:

* ನೆಟ್‌ಫ್ಲಿಕ್ಸ್‌ (ಒಟಿಟಿ ಪ್ಲಾಟ್‌ಫಾರ್ಮ್)
* ಟಿಕ್‌ಟಾಕ್‌ (ವಿಡಿಯೊ ಶೇರಿಂಗ್‌ ಪ್ಲಾಟ್‌ಫಾರ್ಮ್‌)
* ವಿವರ್ಕ್‌ (ರಿಯಲ್‌ ಎಸ್ಟೇಟ್‌ ಕಂಪನಿ)
* ನಿಸಾನ್‌ (ಕಾರು ತಯಾರಿಕಾ ಕಂಪನಿ)
* ಅರ್ನಸ್ಟ್ ಅಂಡ್‌ ಯಂಗ್‌
* ಕೆಪಿಎಂಜಿ ಮತ್ತು ಪ್ರೈಸ್‌ವಾಟರ್‌ಹೌಸ್‌ಕೂಪರ್ಸ್‌
* ಅಮೆರಿಕನ್‌ ಎಕ್ಸ್ ಪ್ರೆಸ್‌
* ವೀಸಾ ಮತ್ತು ಮಾಸ್ಟರ್‌ಕಾರ್ಡ್
* ಮೈಕ್ರೊಸಾಫ್ಟ್‌
* ಸ್ಯಾಮ್‌ಸಂಗ್‌
* ಏರ್‌ಬಿಎನ್‌ಬಿ
* ಗೂಗಲ್‌
* ಪೋಕ್ಸ್‌ವ್ಯಾಗನ್‌
* ಹೋಂಡಾ
* ಸ್ಪಾಟಿಫೈ
* ಡೆಲ್‌
* ಒರಾಕಲ್‌
* ಆ್ಯಪಲ್‌
* ಮೆಟಾ
* ಟ್ವಿಟರ್‌
* ವಾಲ್ಟ್‌ ಡಿಸ್ನಿ ಕಂಪನಿ
* ಶೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT