ಶುಕ್ರವಾರ, ಮೇ 27, 2022
21 °C

ಪಾಕ್‌ ಹಂಗಾಮಿ ಪ್ರಧಾನಿ ಹುದ್ದೆಗೆ ನಿವೃತ್ತ ಮುಖ್ಯನ್ಯಾಯಮೂರ್ತಿ: ಪಿಟಿಐ ಪ್ರಸ್ತಾವ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಪಾಕಿಸ್ತಾನದ ಹಂಗಾಮಿ ಪ್ರಧಾನಿ ಹುದ್ದೆಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರ ಹೆಸರನ್ನು ಪಿಟಿಐ (ಪಾಕಿಸ್ತಾನ್‌ ತೆಹ್ರಿಕ್‌ ಇ ಇನ್ಸಾಫ್‌)ನ ಕೋರ್ ಕಮಿಟಿ ಶಿಫಾರಸು ಮಾಡಿದೆ ಎಂದು ಮಾಜಿ ಕಾನೂನು ಮತ್ತು ಮಾಹಿತಿ ಸಚಿವ ಫವಾದ್ ಚೌಧರಿ ಸೋಮವಾರ ಹೇಳಿದ್ದಾರೆ.

ಹಂಗಾಮಿ ಪ್ರಧಾನಿಯ ಹೆಸರನ್ನು ಸೂಚಿಸುವಂತೆ ಅಧ್ಯಕ್ಷ ಆರಿಫ್ ಅಲ್ವಿ ಅವರು ಪ್ರಧಾನಿ ಇಮ್ರಾನ್ ಖಾನ್ ಮತ್ತು ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರಿಗೆ ಪತ್ರ ಬರೆದು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಗುಲ್ಜಾರ್ ಅವರ ಹೆಸರನ್ನು ಪಿಟಿಐ ಪ್ರಸ್ತಾಪಿಸಿದೆ. ಇದೇ ವರ್ಷದ ಫೆಬ್ರುವರಿಯಲ್ಲಿ ಗುಲ್ಜಾರ್‌ ಅವರು ಮುಖ್ಯನ್ಯಾಯಮೂರ್ತಿ ಹುದ್ದೆಯಿಂದ ನಿರ್ಗಮಿಸಿದ್ದರು.

ಹಂಗಾಮಿ ಪ್ರಧಾನಿ ನೇಮಕದ ವಿಚಾರದಲ್ಲಿ ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರು ಮೂರು ದಿನಗಳಲ್ಲಿ ಒಮ್ಮತಕ್ಕೆ ಬಾರದೇ ಹೋದಲ್ಲಿ, ಇಬ್ಬರೂ ಎರಡೆರಡು ಹೆಸರನ್ನು ಸಂಸದೀಯ ಸಮಿತಿಗೆ ಶಿಫಾರಸು ಮಾಡಬೇಕಾಗುತ್ತದೆ. ಈ ಸಮಿತಿಯು ಹಂಗಾಮಿ ಪ್ರಧಾನಿ ನೇಮಕದ ಜವಾಬ್ದಾರಿ ಹೊಂದಿರುತ್ತದೆ.

ರಾಷ್ಟ್ರೀಯ ಸಂಸತ್ತು ಮತ್ತು ಸೆನೆಟ್ ಸದಸ್ಯರನ್ನು ಒಳಗೊಂಡ ಎಂಟು ಸದಸ್ಯರ ಸಂಸದೀಯ ಸಮಿತಿಯನ್ನು ಸರ್ಕಾರ ಮತ್ತು ಪ್ರತಿಪಕ್ಷಗಳ ಪ್ರಾತಿನಿಧ್ಯದಲ್ಲಿ ಸ್ಪೀಕರ್‌ ರಚಿಸುತ್ತಾರೆ.

ಸಂಸತ್ತು ವಿಸರ್ಜನೆಯಾಗಿದ್ದರೂ ಹಂಗಾಮಿ ಪ್ರಧಾನಿ ನೇಮಕವಾಗುವವರೆಗೆ ಇಮ್ರಾನ್‌ ಅವರೇ ಪ್ರಧಾನ ಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಅಧ್ಯಕ್ಷರ ಕಚೇರಿಯು ಭಾನುವಾರ ತಿಳಿಸಿತ್ತು.

ಪಾಕಿಸ್ತಾನದ ಸಂಸತ್ತನ್ನು ಭಾನುವಾರ ವಿಸರ್ಜನೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು