ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತೆ, ಮಾವ ಸಾಧನೆ ಬಗ್ಗೆ ಹೆಮ್ಮೆ ಇದೆ: ರಿಷಿ ಸುನಕ್‌

Last Updated 18 ಜುಲೈ 2022, 11:43 IST
ಅಕ್ಷರ ಗಾತ್ರ

ಲಂಡನ್‌ : ಇನ್ಫೋಸಿಸ್‌ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಸಾಧನೆಗಳ ಬಗ್ಗೆ ಹೆಮ್ಮೆ ಇದೆ ಎಂದು ಬ್ರಿಟನ್‌ನ ಪ್ರಧಾನಿ ಹುದ್ದೆಗೆ ಮುಂಚೂಣಿಯಲ್ಲಿರುವ ಅವರ ಅಳಿಯ ರಿಷಿ ಸುನಕ್‌ ಹೇಳಿದ್ದಾರೆ.

‘ನನ್ನ ಮಾವ ಬಹಳ ಕಷ್ಟದಿಂದ ಮುಂದೆ ಬಂದಿದ್ದಾರೆ. ಅವರ ಬಳಿ ಕನಸೊಂದೇ ಇತ್ತು; ಹಣ ಇರಲಿಲ್ಲ. ನನ್ನ ಅತ್ತೆ ನೀಡಿದ ಉಳಿತಾಯದ ಹಣವನ್ನು ಬಳಸಿಕೊಂಡು ಇಷ್ಟೊಂದು ದೊಡ್ಡ ಸಂಸ್ಥೆಯನ್ನು ಕಟ್ಟಿದ್ದಾರೆ. ಈ ಸಂಸ್ಥೆಯು ಬ್ರಿಟನ್‌ನ ಸಾವಿರಾರು ಜನರಿಗೆ ಉದ್ಯೋಗವನ್ನೂ ನೀಡಿದೆ’ ಎಂದರು.

ಭಾನುವಾರ ರಾತ್ರಿ ಟಿ.ವಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ರಿಷಿ, ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರ ಕುಟುಂಬದ ಸಂಪತ್ತಿನ ಕುರಿತ ಮಾಧ್ಯಮ ವರದಿಗಳ ಬಗ್ಗೆ ಹೀಗೆ ಪ್ರತಿಕ್ರಿಯೆ ನೀಡಿದರು. ಅಕ್ಷತಾ ಅವರು ತೆರಿಗೆ ಪಾವತಿಸಿಲ್ಲ ಎಂದು ಬ್ರಿಟನ್‌ನ ಮಾಧ್ಯಮಗಳು ಕೆಲವು ತಿಂಗಳ ಹಿಂದೆ ವರದಿ ಮಾಡಿದ್ದವು.

ಪತ್ನಿ ಹಾಗೂ ತಮ್ಮ ಕುರಿತ ವಿವಾದಗಳ ಬಗ್ಗೆ ಪ್ರತಿಕ್ರಿಯಿಸಿದ ರಿಷಿ, ‘ವಿವಾದ ಪ್ರಾರಂಭವಾದ ಬೆನ್ನಲ್ಲೇ ನಿವಾಸಿಯೇತರ (ನಾನ್‌ ಡೊಮಿಸೈಲ್‌) ಸ್ಥಾನಮಾನವನ್ನು ಅಕ್ಷತಾ ಹಿಂದಿರುಗಿಸಿದ್ದಾರೆ. ಜತೆಗೆ, ನಾನು ಕೂಡ ಅಮೆರಿಕದ ಗ್ರೀನ್‌ ಕಾರ್ಡ್‌ ಅನ್ನು ಹಿಂದಿರುಗಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT