ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ ಹಿಂಸಾಚಾರ: ಕರಡು ನಿರ್ಣಯಕ್ಕೆ ಭಾರತ ಗೈರು

Last Updated 22 ಡಿಸೆಂಬರ್ 2022, 14:02 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಮ್ಯಾನ್ಮಾರ್‌ ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದು ಒತ್ತಾಯಿಸುವುದರ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡನೆಯಾದ ಕರಡು ನಿರ್ಣಯದ ಮತದಾನದಿಂದ ಭಾರತ, ಚೀನಾ ಮತ್ತು ರಷ್ಯಾ ದೂರವುಳಿದವು.

ಆಂಗ್ ಸಾನ್‌ ಸೂಕಿ ಸೇರಿದಂತೆ ಬಂಧನದಲ್ಲಿರುವ ರಾಜಕೀಯ ಕೈದಿಗಳನ್ನು ಮಿಲಿಟರಿ ಆಡಳಿತಬಿಡುಗಡೆ ಮಾಡಬೇಕು ಎಂದು ಕರಡಿನಲ್ಲಿ ಒತ್ತಾಯಿಸಲಾಗಿದೆ.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ, 12 ಸದಸ್ಯ ರಾಷ್ಟ್ರಗಳು ನಿರ್ಣಯದ ಪರ ಮತ ಚಲಾಯಿಸಿದವು. ವಿರುದ್ಧವಾಗಿ ಯಾವುದೇ ಮತ ಚಲಾವಣೆಯಾಗದೆ ನಿರ್ಣಯ ಅಂಗೀಕಾರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT