ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲೆಸ್ಟೀನ್‌ ನಿರಾಶ್ರಿತರ ಕಲ್ಯಾಣಕ್ಕೆ ಭಾರತ ನೆರವು

Last Updated 1 ನವೆಂಬರ್ 2022, 11:01 IST
ಅಕ್ಷರ ಗಾತ್ರ

ರಮಲ್ಲಾ (ವೆಸ್ಟ್‌ ಬ್ಯಾಂಕ್‌):(ಪಿಟಿಐ): ಪ್ಯಾಲೆಸ್ಟೀನ್‌ ನಿರಾಶ್ರಿತರ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಭಾರತವು ₹20.66 ಕೋಟಿ ಮೊತ್ತದ (2.5 ಮಿಲಿಯನ್‌ ಡಾಲರ್‌) ಚೆಕ್‌ ಅನ್ನು ವಿಶ್ವಸಂಸ್ಥೆಗೆ ಹಸ್ತಾಂತರಿಸಿತು.

2018ರಿಂದ ಈಚೆಗೆ ಪ್ಯಾಲೆಸ್ಟೀನಿಯನ್ನರ ನೆರವಿಗಾಗಿ ಭಾರತ ವಿಶ್ವಸಂಸ್ಥೆಯರಿಲೀಫ್ ಆ್ಯಂಡ್‌ ವರ್ಕ್ಸ್‌ ಏಜೆನ್ಸಿಗೆ (ಯುಎನ್‌ಆರ್‌ಡಬ್ಲ್ಯುಎ) ₹186 ಕೋಟಿ ನೆರವು ನೀಡಿದೆ.

ಯುಎನ್‌ಆರ್‌ಡಬ್ಲ್ಯುಎಗೆ ವಾರ್ಷಿಕ ₹41.32 ಕೋಟಿ (5 ಮಿಲಿಯನ್‌ ಡಾಲರ್‌) ನೀಡುವುದಾಗಿ ಭಾರತ ತಿಳಿಸಿದೆ. ಇದರ ಭಾಗವಾಗಿ ಎರಡನೇ ಹಂತದಲ್ಲಿ ಇಷ್ಟುಹಣ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT