ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಸವಾಲುಗಳನ್ನು ಎದುರಿಸುತ್ತಿರುವ ಭಾರತ: ಅಮೆರಿಕ

Last Updated 12 ಫೆಬ್ರುವರಿ 2022, 3:37 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಗಮನಾರ್ಹವಾದ ಭೌಗೋಳಿಕ ರಾಜಕೀಯ ಸವಾಲುಗಳಿಂದ ಸುತ್ತುವರಿದಿದೆ. ಅದರಲ್ಲೂ ನಿರ್ದಿಷ್ಟವಾಗಿ ಚೀನಾದಿಂದ ನೈಜ ನಿಯಂತ್ರಣ ರೇಖೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆ ಎಂದು ಶ್ವೇತಭವನವು ತನ್ನ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ವರದಿಯಲ್ಲಿ ಹೇಳಿದೆ.

ಶುಕ್ರವಾರ ಬಿಡುಗಡೆಯಾದ ಕಾರ್ಯತಂತ್ರದ ವರದಿಯು ಅಧ್ಯಕ್ಷ ಜೋ ಬೈಡನ್ ನೇತೃತ್ವದ ಆಡಳಿತದ ಮೊದಲ ಪ್ರಾದೇಶಿಕ ನಿರ್ದಿಷ್ಟ ವರದಿಯಾಗಿದೆ. ಇಂಡೋ-ಪೆಸಿಫಿಕ್‌ನಲ್ಲಿ ಅಮೆರಿಕದ ಸ್ಥಾನವನ್ನು ದೃಢವಾಗಿ ತಿಳಿಸುವ, ಈ ಪ್ರದೇಶವನ್ನು ಬಲಪಡಿಸಲು ಮತ್ತು ಭಾರತದ ಉನ್ನತಿ ಹಾಗೂ ಪ್ರಾದೇಶಿಕ ನಾಯಕತ್ವವನ್ನು ಬೆಂಬಲಿಸುವ ಅಧ್ಯಕ್ಷರ ದೃಷ್ಟಿಕೋನವನ್ನು ಇದು ವಿವರಿಸುತ್ತದೆ.

‘ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಯನ್ನು ಉತ್ತೇಜಿಸಲು ಅಮೆರಿಕ ಮತ್ತು ಭಾರತವು ಒಟ್ಟಾಗಿ ಹಾಗೂ ಪ್ರಾದೇಶಿಕ ಗುಂಪುಗಳ ಮೂಲಕ ಕೆಲಸ ಮಾಡುವ ಕಾರ್ಯತಂತ್ರದ ಪಾಲುದಾರಿಕೆಯನ್ನು ನಿರ್ಮಿಸುವುದನ್ನು ಮುಂದುವರಿಸುತ್ತೇವೆ. ಆರೋಗ್ಯ, ಬಾಹ್ಯಾಕಾಶ ಮತ್ತು ಸೈಬರ್‌ಸ್ಪೇಸ್‌ನಂತಹ ಹೊಸ ಡೊಮೇನ್‌ಗಳಲ್ಲಿ ಸಹಯೋಗ, ನಮ್ಮ ಆರ್ಥಿಕ ಮತ್ತು ತಂತ್ರಜ್ಞಾನದ ಸಹಕಾರವನ್ನು ಗಾಢಗೊಳಿಸುವ ಮೂಲಕ ಮುಕ್ತ ಇಂಡೋ-ಪೆಸಿಫಿಕ್‌ ಪ್ರದೇಶವನ್ನು ನಿರ್ಮಿಸಲು ಯತ್ನಿಸಲಾಗುವುದು’ ಎಂದು ಶ್ವೇತಭವನ ಹೇಳಿದೆ.

‘ಭಾರತವು ದಕ್ಷಿಣ ಏಷ್ಯಾ ಮತ್ತು ಹಿಂದೂ ಮಹಾಸಾಗರದಲ್ಲಿ ಸಮಾನ ಮನಸ್ಕ ಪಾಲುದಾರ ಮತ್ತು ನಾಯಕ ಎಂದು ನಾವು ಗುರುತಿಸುತ್ತೇವೆ, ಆಗ್ನೇಯ ಏಷ್ಯಾದಲ್ಲಿ ಭಾರತ ಸಕ್ರಿಯವಾಗಿದೆ. ಕ್ವಾಡ್ ಮತ್ತು ಇತರ ಪ್ರಾದೇಶಿಕ ವೇದಿಕೆಗಳ ಪ್ರೇರಕ ಶಕ್ತಿ ಮತ್ತು ಪ್ರಾದೇಶಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಭಾರತ ಎಂಜಿನ್ ಆಗಿದೆ’ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.

ಈ ಮಧ್ಯೆ, ಭಾರತವು ಎದುರಿಸುತ್ತಿರುವ ಮಹತ್ವದ ಸವಾಲುಗಳ ಬಗ್ಗೆ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಗಮನ ಸೆಳೆದಿದ್ದಾರೆ.

‘ಭಾರತವು ಗಡಿಯಲ್ಲಿ ಬಹಳ ಮಹತ್ವದ ಸವಾಲುಗಳನ್ನು ಎದುರಿಸುತ್ತಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದ ನಡವಳಿಕೆಯು ಭಾರತದ ಮೇಲೆ ಪ್ರಭಾವ ಬೀರಿದೆ. ಜಾಗತಿಕ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವ ಸಮುದ್ರ ಸಂಪ್ರದಾಯವನ್ನು ಹೊಂದಿರುವ ಮತ್ತೊಂದು ಪ್ರಜಾಪ್ರಭುತ್ವ ದೇಶ(ಭಾರತ)ದೊಂದಿಗೆ ಕೆಲಸ ಮಾಡಲು ನಾವು ಅವಕಾಶವನ್ನು ಹೊಂದಿದ್ದೇವೆ’ ಎಂದು ಶ್ವೇತಭವನದ ಅಧಿಕಾರಿ ಹೇಳಿದರು.

‘ಭಾರತಕ್ಕೆ ನಿರ್ಣಾಯಕ ಕಾರ್ಯತಂತ್ರದ ಪಾಲುದಾರ ಎಂಬ ಮನ್ನಣೆ ಇದೆ ಮತ್ತು ‌ಭಾರತದ ಜೊತೆಗಿನ ಸಂಬಂಧವನ್ನು ಗಮನಾರ್ಹವಾಗಿ ವಿಸ್ತರಿಸಲು ಮತ್ತು ಆಳವಾಗಿಸಲು ಹಿಂದಿನ ಆಡಳಿತಗಳ ಉತ್ತಮ ಕೆಲಸವನ್ನು ಮುಂದುವರಿಸುವ ಬಯಕೆಯಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT