ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ’

Last Updated 30 ಮಾರ್ಚ್ 2021, 18:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಕಾನೂನು ಬಾಹಿರ ಹಾಗೂ ಜನಾಂಗೀಯ ಹತ್ಯೆಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಧ್ಯಮಗಳ ಮೇಲಿನ ನಿಯಂತ್ರಣ, ಭ್ರಷ್ಟಾಚಾರ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಸೇರಿದಂತೆ ಭಾರತದಲ್ಲಿ ಮಾನವ ಹಕ್ಕುಗಳ ಕುರಿತಾದ ಸಮಸ್ಯೆಗಳು ವ್ಯಾಪಕವಾಗಿವೆ ಎಂದು ಅಮೆರಿಕದ ವರದಿಯೊಂದು ತಿಳಿಸಿದೆ.

ಅಮೆರಿಕದ ಸಂಸತ್ತಿನ ’2020ರ ಅವಧಿಯಲ್ಲಿ ವಿಶ್ವದಲ್ಲಿ ಮಾನವ ಹಕ್ಕುಗಳ ಪಾಲನೆ‘ ಕುರಿತಾದ ವರದಿಯಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಸುಧಾರಣೆ ಕಂಡಿದೆ ಎಂದು ಉಲ್ಲೇಖಿಸಿದೆ.

ಜಮ್ಮು ಹಾಗೂ ಕಾಶ್ಮೀರದಲ್ಲಿ ಕೆಲವು ಭದ್ರತಾ ಹಾಗೂ ಸಂವಹನ ಸಂಪರ್ಕ ನಿರ್ಬಂಧಗಳನ್ನು ತೆಗೆದು ಹಾಕಿ ಸಹಜ ಸ್ಥಿತಿ ಸ್ಥಾಪಿಸಲು ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿತು. ಸರ್ಕಾರವು ಅನೇಕ ರಾಜಕೀಯ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದೆ ಎಂದು ವರದಿಯಲ್ಲಿನ ಭಾರತ ವಿಭಾಗದಲ್ಲಿ ತಿಳಿಸಿದೆ.

ಜನವರಿಯಲ್ಲಿ ಸರ್ಕಾರವು ಜಮ್ಮುವಿನಲ್ಲಿ ಭಾಗಶಃ ಅಂತರ್ಜಾಲ ಸೌಲಭ್ಯ ಒದಗಿಸಿದರೂ, ಜಮ್ಮು– ಕಾಶ್ಮೀರದ ಬಹುಭಾಗಗಳಲ್ಲಿ ಹೈ ಸ್ಪೀಡ್‌ 4ಜಿ ಮೊಬೈಲ್‌ ಇಂಟರ್‌ನೆಟ್‌ ಬಳಕೆಗೆ ನಿರ್ಬಂಧವನ್ನು ಮುಂದುವರಿಸಿತು. ಚುನಾವಣಾ ಕ್ಷೇತ್ರಗಳನ್ನು ಮರುವಿಂಗಡಿಸುವ ಪ್ರಸ್ತಾಪ ಸರ್ಕಾರ ಮಾಡಿದರೂ, ಸ್ಥಳೀಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಲಿಲ್ಲ. ಸ್ಥಳೀಯ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಡಿಸೆಂಬರ್‌ನಲ್ಲಿ‌ ನಡೆದಿದ್ದು, ಕಾಶ್ಮೀರದಲ್ಲಿನ ವಿರೋಧ ಪಕ್ಷಗಳ ಒಕ್ಕೂಟವು ಹೆಚ್ಚಿನ ಸ್ಥಾನ ಗೆದ್ದಿತು ಎಂದು ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT