ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಇಂಡೊ–ಪೆಸಿಫಿಕ್‌ಗಾಗಿ ಭಾರತ– ಜಪಾನ್‌ ಕಾರ್ಯತಂತ್ರದ ಪಾಲುದಾರಿಕೆ: ಸಿಂಗ್

Last Updated 8 ಸೆಪ್ಟೆಂಬರ್ 2022, 14:44 IST
ಅಕ್ಷರ ಗಾತ್ರ

ಟೊಕಿಯೊ: ಚೀನಾ ತನ್ನ ಸೇನಾ ಬಲ ಹೆಚ್ಚಿಸುತ್ತಿರುವಾಗ, ಭಾರತ ಮತ್ತು ಜಪಾನ್‌ ಮುಕ್ತ ಇಂಡೊ– ಪೆಸಿಫಿಕ್‌ ಒಳಗೊಂಡಂತೆ ತಮ್ಮ ಗಡಿ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಗಾಗಿ ವಿಶೇಷ ಕಾರ್ಯತಂತ್ರ ಹಾಗೂ ಜಾಗತಿಕ ಪಾಲುದಾರಿಕೆ ಅನುಸರಿಸುವುದು ಬಹುಮುಖ್ಯ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಗುರುವಾರ ಹೇಳಿದರು.

ಜಪಾನ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ರಾಜನಾಥ ಸಿಂಗ್‌, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು 2+2 ಸಚಿವರ ಸಭೆಯಲ್ಲಿ ಭಾಗವಹಿಸಿ,ಭಾರತದ ಇಂಡೊ– ಪೆಸಿಫಿಕ್ ಸಾಗರಗಳ ಉಪಕ್ರಮವು (ಐಪಿಒಐ) ಜಪಾನ್‌ನ ಮುಕ್ತ ಮತ್ತು ತೆರೆದ ಇಂಡೊ– ಪೆಸಿಫಿಕ್‌ನೊಂದಿಗೆ (ಎಫ್‌ಒಐಪಿ) ಹಲವು ಸಮಾನ ಅಂಶಗಳನ್ನು ಹೊಂದಿದೆ. ಉಭಯ ರಾಷ್ಟ್ರಗಳ ಬಾಂಧವ್ಯಕ್ಕೆ ಮುಕ್ತ, ನಿಯಮಾಧಾರಿತ ಮತ್ತು ಸಮಗ್ರ ಇಂಡೊ– ಪೆಸಿಫಿಕ್ ಪ್ರದೇಶ ಬಹಳ ಮುಖ್ಯ ಎನ್ನುವುದನ್ನು ನಂಬಿದ್ದೇವೆ ಎಂದರು.

ರಕ್ಷಣಾ ಸಹಕಾರ, ಜಂಟಿ ಸೇನಾ ತಾಲೀಮಿಗೆಸಮ್ಮತಿ: ದ್ವಿಪಕ್ಷೀಯ ರಕ್ಷಣಾ ಸಹಕಾರ ಹಾಗೂಯುದ್ಧ ವಿಮಾನಗಳ ಜಂಟಿ ಸಮರಾಭ್ಯಾಸ ಸೇರಿ ಹೆಚ್ಚಿನ ಸೇನಾತಾಲೀಮು ನಡೆಸಲು ಭಾರತ ಮತ್ತು ಜಪಾನ್‌ ಗುರುವಾರಒಪ್ಪಂದ ಮಾಡಿಕೊಂಡಿವೆ.

ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಜಪಾನ್ ರಕ್ಷಣಾ ಸಚಿವ ಯಸುಕಜು ಹಮಾಡ ಅವರು 90 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ಉಭಯ ರಾಷ್ಟ್ರಗಳ ವಾಯು ಪಡೆಗಳ ನಡುವೆ ಸಮನ್ವಯ ಸಾಧಿಸಲು ಜಂಟಿ ಸೇನಾ ತಾಲೀಮಿಗೆ ಸಮ್ಮತಿಸಿದರು.

ಚೀನಾದ ಆಕ್ರಮಣಕಾರಿ ನಡೆಯ ಮಧ್ಯೆ, ಮುಕ್ತ, ತೆರೆದ ಮತ್ತು ನಿಯಮಾಧಾರಿತ ಇಂಡೊ– ಪೆಸಿಫಿಕ್ ಪ್ರದೇಶ ಖಾತ್ರಿಗೆ ನಿರ್ಣಾಯಕ ಪಾತ್ರ ವಹಿಸಲು ಉಭಯ ರಾಷ್ಟ್ರಗಳು ವಿಶೇಷ ವ್ಯೂಹಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT