ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಹೊಸ ಪ್ರಕರಣ ಭಾರತದಲ್ಲಿ ಶೇ 13ರಷ್ಟು ಇಳಿಕೆ

ವಾರದ ಅವಧಿಯಲ್ಲಿ ವರದಿಯಾದ ಪ್ರಕರಣಗಳು: ವಿಶ್ವ ಆರೋಗ್ಯ ಸಂಸ್ಥೆಯಿಂದ ವರದಿ
Last Updated 19 ಮೇ 2021, 6:47 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕಳೆದ ವಾರ ಭಾರತದಲ್ಲಿ ಹೊಸದಾಗಿ ವರದಿಯಾಗುವ ಕೋವಿಡ್‌–19 ಪ್ರಕರಣಗಳ ಸಂಖ್ಯೆಯಲ್ಲಿ ಶೇ 13ರಷ್ಟು ಇಳಿಕೆ ಕಂಡು ಬಂದಿದೆ. ಆದರೆ, ಜಾಗತಿಕ ಮಟ್ಟ ಪರಿಗಣಿಸಿದರೆ, ಹೊಸ ಪ್ರಕರಣಗಳ ಸಂಖ್ಯೆ ಈಗಲೂ ಅಲ್ಲಿ ಗರಿಷ್ಠ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ವಿವಿಧ ರಾಷ್ಟ್ರಗಳಲ್ಲಿ ವರದಿಯಾಗುತ್ತಿರುವ ಹೊಸ ಪ್ರಕರಣಗಳು, ಸಾವುಗಳು ಸೇರಿದಂತೆ ಕೋವಿಡ್‌–19ಗೆ ಸಂಬಂಧಪಟ್ಟ ವಾರದ ಅಂಕಿ–ಅಂಶಗಳನ್ನು ಒಳಗೊಂಡ ‘ವೀಕ್ಲಿ ಎಪಿಡೆಮಿಯೊಲಾಜಿಕಲ್‌ ಅಪ್‌ಡೇಟ್‌ ಡೇಟಾ’ ವನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದೆ. ಮೇ 16ರ ವರೆಗಿನ ಮಾಹಿತಿಯನ್ನು ಈ ವರದಿ ಒಳಗೊಂಡಿದೆ.

ಭಾರತದಲ್ಲಿ ಕಳೆದ ವಾರ ಹೊಸದಾಗಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 23,87,663 ಇತ್ತು. ಇದು ಅದರ ಹಿಂದಿನ ವಾರ ವರದಿಯಾದ ಪ್ರಕರಣಗಳಿಗೆ ಹೋಲಿಸಿದರೆ, ಶೇ 13ರಷ್ಟು ಕಡಿಮೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಭಾರತದಲ್ಲಿ ಸಾವಿನ ಪ್ರಮಾಣವೂ ಅಧಿಕವಾಗಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ನಂತರದ ಸ್ಥಾನದಲ್ಲಿ ಬ್ರೆಜಿಲ್‌ ಇದ್ದು, ವಾರದ ಅವಧಿಯಲ್ಲಿ ವರದಿಯಾದ ಹೊಸ ಪ್ರಕರಣಗಳ ಸಂಖ್ಯೆ 4,37,076 ಇದ್ದು, ಅದರ ಹಿಂದಿನ ವಾರಕ್ಕೆ ಹೋಲಿಸಿದರೆ ಶೇ 3ರಷ್ಟು ಹೆಚ್ಚಳ ಕಂಡುಬಂದಿದೆ. ಅಮೆರಿಕದಲ್ಲಿ 2,35,638 (ಶೇ 21ರಷ್ಟು ಇಳಿಕೆ), ಅರ್ಜೆಂಟೀನಾ–1,51,332 (ಶೇ 8ರಷ್ಟು ಹೆಚ್ಚಳ) ಹಾಗೂ ಕೊಲಂಬಿಯಾದಲ್ಲಿ 1,15,834 ಹೊಸ ಪ್ರಕರಣಗಳು ವರದಿಯಾಗಿದ್ದು, ಹಿಂದಿನ ವಾರದ ಪ್ರಕರಣಗಳಿಗೆ ಹೋಲಿಸಿದರೆ ಇಲ್ಲಿ ಶೇ 6ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT