ಶನಿವಾರ, ನವೆಂಬರ್ 26, 2022
23 °C

ಸಪ್ತಕೋಸಿ ಅಣೆಕಟ್ಟು ಯೋಜನೆ ಅಧ್ಯಯನಕ್ಕೆ ಭಾರತ–ನೇಪಾಳ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ಸಪ್ತ ಕೋಸಿ ಅಣೆಕಟ್ಟು ಯೋಜನೆ ಅನುಷ್ಠಾನ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಭಾರತ ಮತ್ತು ನೇಪಾಳ ನಿರ್ಧರಿಸಿವೆ. ಉಭಯ ದೇಶಗಳ ಹಿರಿಯ ಅಧಿಕಾರಿಗಳು ಸಭೆ ಇಲ್ಲಿ ನಡೆಯಿತು.

ಮಹಾಕಾಳಿ ಒಪ್ಪಂದದ ಅನುಷ್ಠಾನ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಹಕಾರ ಒಳಗೊಂಡಂತೆ ದ್ವಿಪಕ್ಷೀಯ ಸಹಕಾರವನ್ನು  ಪರಿಶೀಲಿಸಿದರು. ಸಪ್ತ ಕೋಸಿ ಅಣೆಕಟ್ಟು ನಿರ್ಮಾಣ ಕುರಿತು ಉಭಯ ದೇಶಗಳ ತಜ್ಞರ ತಂಡ ಶೀಘ್ರವೇ ಭೇಟಿಯಾಗಲಿದೆ ಎಂದು ಭಾರತ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ಉದ್ದೇಶಿತ ಅಣೆಕಟ್ಟು ಅನ್ನು ನೇಪಾಳದ ಸಪ್ತಕೋಶಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದ್ದು, ಆಗ್ನೇಯ ನೇಪಾಳ ಮತ್ತು ಉತ್ತರ ಬಿಹಾರದಲ್ಲಿ ಪ್ರವಾಹದ ತಡೆ ಜೊತೆಗೆ ಜಲವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು