ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಸೌದಿ ಬಾಂಧವ್ಯವು ಹಂಚಿಕೆಯ ಬೆಳವಣಿಗೆಯನ್ನು ಒಳಗೊಂಡಿದೆ: ಎಸ್‌.ಜೈಶಂಕರ್‌

Last Updated 11 ಸೆಪ್ಟೆಂಬರ್ 2022, 13:50 IST
ಅಕ್ಷರ ಗಾತ್ರ

ರಿಯಾದ್‌: ‘ಭಾರತ ಮತ್ತು ಸೌದಿ ಅರೇಬಿಯಾ ನಡುವಣ ಕಾರ್ಯತಂತ್ರದ ಬಾಂಧವ್ಯವು ಹಂಚಿಕೆಯ ಬೆಳವಣಿಗೆ, ಸಮೃದ್ಧಿ, ಸ್ಥಿರತೆ, ಭದ್ರತೆ ಮತ್ತು ಅಭಿವೃದ್ಧಿಯ ಭರವಸೆಯನ್ನು ಒಳಗೊಂಡಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿಯ ವಿಚಾರವಾಗಿ ಚರ್ಚಿಸಲು ಸೌದಿ ಅರೇಬಿಯಾಕ್ಕೆ ಮೂರು ದಿನ ಪ್ರವಾಸ ಕೈಗೊಂಡಿರುವ ಅವರು ಇಲ್ಲಿನ ಪ್ರಿನ್ಸ್‌ ಸೌದ್‌ ಅಲ್ ಫೈಸಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಪ್ಲೊಮಾಟಿಕ್‌ ಸ್ಟಡೀಸ್‌ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ರಾಜತಾಂತ್ರಿಕರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ವಿದೇಶಾಂಗ ಸಚಿವರಾದ ಬಳಿಕ ಮೊದಲ ಬಾರಿ ಸೌದಿಗೆ ಭೇಟಿ ನೀಡಿರುವ ಜೈಶಂಕರ್‌ ಅವರುರಾಜಕೀಯ, ಭದ್ರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹಯೋಗದ ಕುರಿತಾದ ಪಿಎಸ್‌ಎಸ್‌ಸಿ ಸಮಿತಿ ಸಭೆಯಲ್ಲಿ ಪ್ರಿನ್ಸ್‌ ಫೈಸಲ್‌ ಬಿನ್‌ ಫರ್ಹಾನ್‌ ಅಲ್‌ ಸೌದ್‌ ಜೊತೆ ಹಲವು ವಿಚಾರಗಳ ಕುರಿತು ಚರ್ಚಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT