ಗುರುವಾರ , ಜುಲೈ 7, 2022
20 °C

ಹಸಿರು, ಸುಸ್ಥಿರ ಭವಿಷ್ಯ: ವಿಶ್ವಕ್ಕೆ ಭಾರತ-ಅಮೆರಿಕ ಸಂಬಂಧ ಪ್ರಮುಖ ಆಧಾರಸ್ತಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

 ವಾಷಿಂಗ್ಟನ್(ಪಿಟಿಐ): ಜಗತ್ತಿಗೆ ಹಸಿರು ಮತ್ತು ಸುಸ್ಥಿರ ಭವಿಷ್ಯ ತಿಳಿಯಲು ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವು ಪ್ರಮುಖ ಆಧಾರಸ್ತಂಭವಾಗಲಿದೆ ಎಂದು ಅಮೆರಿಕಕ್ಕೆ ಭಾರತದ ರಾಯಭಾರಿ ಅಧಿಕಾರಿ ತರಣ್‌ಜಿತ್‌ ಸಿಂಗ್ ಸಂಧು ಅವರು ಹೇಳಿದ್ದಾರೆ. 

 ಈ ಕುರಿತಾಗಿ ಸಂಧು ಅವರು ಬರೆದ ಲೇಖನವನ್ನು ನ್ಯೂಸ್‌ವೀಕ್ ಎಂಬ ನಿಯತಕಾಲಿಕೆ ಪ್ರಕಟ ಮಾಡಿದ್ದು, ಇದರಲ್ಲಿ ಹವಾಮಾನ ಪ್ರಕ್ರಿಯೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತು ಅಮೆರಿಕ ದೇಶಗಳು ದ್ವಿಪಕ್ಷೀಯ, ಬಹುಪಕ್ಷೀಯ ಮತ್ತು ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಉಲ್ಲೇಖಿಸಿದ್ದಾರೆ. 

ಭಾರತದಲ್ಲಿ ಮಧ್ಯಮ ಮತ್ತು ಸಣ್ಣ ಪ್ರಮಾಣದ ಉದ್ದಿಮೆಗಳು ತಮ್ಮ ಸಂಸ್ಥೆಯ ಕಟ್ಟಡಗಳ ಮೇಲೆ ಸೌರಶಕ್ತಿ ಫಲಕಗಳನ್ನು ಅಳವಡಿಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಅಮೆರಿಕದ ಹಣಕಾಸು ಸಂಸ್ಥೆಗಳು ಘೋಷಣೆ ಮಾಡಿವೆ. ಅಲ್ಲದೆ ಸುಸ್ಥಿರ ಜಲಜನಕ ಉತ್ಪಾದನೆ ಮತ್ತು ಅದರ ಸುರಕ್ಷಿತ ಬಳಕೆಗೆ ಸಂಬಂಧಿಸಿ ಉಭಯ ದೇಶಗಳು ಜಲಜನಕ ಕಾರ್ಯಪಡೆಯನ್ನು ರಚನೆ ಮಾಡಿವೆ ಎಂದು ಅವರು ತಿಳಿಸಿದ್ದಾರೆ. 

2040ರಲ್ಲಿ ಯಾವುದೇ ದೇಶಕ್ಕಿಂತ ಅತಿಹೆಚ್ಚು ಇಂಧನ ಬೇಡಿಕೆ ಭಾರತಕ್ಕೆ ಎದುರಾಗುವ ನಿರೀಕ್ಷೆಯಿದೆ. ಮುಂದಿನ 20 ವರ್ಷಗಳಲ್ಲಿ ಭಾರತಕ್ಕೆ ಬೇಡಿಕೆಯಷ್ಟು ವಿದ್ಯುತ್ ಪೂರೈಸಲು ಪ್ರಸ್ತುತ ಯುರೋಪ್ ಒಕ್ಕೂಟ ಹೊಂದಿರುವ ಇಂಧನ ವ್ಯವಸ್ಥೆ ಬೇಕಾಗಲಿದೆ ಎನ್ನಲಾಗಿದೆ.  

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು