ಮಂಗಳವಾರ, ಜನವರಿ 19, 2021
17 °C

ಭಾರತೀಯ-ಅಮೆರಿಕನ್ ಡಾ.ರಾಜ್ ಅಯ್ಯರ್ ಅಮೆರಿಕದ ಸೇನೆಯ ಮುಖ್ಯ ಮಾಹಿತಿ ಅಧಿಕಾರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಭಾರತೀಯ-ಅಮೆರಿಕನ್ ಡಾ. ರಾಜ್ ಅಯ್ಯರ್ ಅವರು ಅಮೆರಿಕ ಸೇನೆಯ ಮುಖ್ಯ ಮಾಹಿತಿ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಅಮೆರಿಕ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ಮುಖ್ಯ ಮಾಹಿತಿ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಿತ್ತು. ಈ ಹುದ್ದೆ ಅಲಂಕರಿಸುವ ಮೂಲಕ, ಅಮೆರಿಕದ ರಕ್ಷಣಾ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿ ಭಾರತೀಯ ಅಮೆರಿಕನ್ ನಾಗರಿಕರು ಸ್ಥಾನ ಪಡೆದಂತಾಗಿದೆ.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಅಯ್ಯರ್ ಅವರು, ಸೇನಾ ಕಾರ್ಯದರ್ಶಿಗೆ ಪ್ರಧಾನ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಾರೆ ಎಂದು ಪೆಂಟಗನ್ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು