ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಮರು ಕೈಗಾರೀಕರಣ ಅಗಲೇಬೇಕು: ಭಾರತ ಮೂಲದ ಅಮೆರಿಕನ್‌ ಸಂಸದ ರೊ ಖನ್ನಾ

10 ಟ್ರಿಲಿಯನ್‌ ಡಾಲರ್‌ ಹೂಡಿಕೆಗೆ ರೊ ಖನ್ನಾ ಸಲಹೆ
Last Updated 31 ಮಾರ್ಚ್ 2021, 7:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಮೆರಿಕದಲ್ಲಿ ಮರು ಕೈಗಾರೀಕರಣ ಆಗಲೇಬೇಕು. ಅದಕ್ಕಾಗಿ 10 ವರ್ಷದಲ್ಲಿ 10 ಟ್ರಿಲಿಯನ್‌ ಡಾಲರ್‌ (ಸುಮಾರು₹735 ಲಕ್ಷ ಕೋಟಿ) ಹೂಡಿಕೆ ಮಾಡಬೇಕು’ ಎಂಬ ಸಲಹೆಯನ್ನು ಭಾರತ ಮೂಲದ ಅಮೆರಿಕನ್‌ ಸಂಸದ ರೊ ಖನ್ನಾ ನೀಡಿದ್ದಾರೆ.

ಈ ಬಗ್ಗೆ ‘ಫಾಕ್ಸ್‌ ನ್ಯೂಸ್‌’ಗೆ ಸಂದರ್ಶನ ನೀಡಿದ ಅವರು, ‘ ಅಮೆರಿಕದಲ್ಲಿ ಮರು ಕೈಗಾರೀಕರಣಕ್ಕಾಗಿ ಬೃಹತ್‌ ಹೂಡಿಕೆಯ ಅವಶ್ಯಕತೆಯಿದೆ. ಇದಕ್ಕಾಗಿ ನಾವು ಬ್ಯಾಟರಿ, ಎಲೆಕ್ಟ್ರಿಕ್‌ ವಾಹನಗಳು ಮತ್ತು ಅವುಗಳಿಗೆ ಬೇಕಾದ ಪ್ರಮುಖ ವಸ್ತುಗಳನ್ನು ಅಮೆರಿಕದಲ್ಲೇ ಉತ್ಪಾದಿಸಬೇಕಾಗುತ್ತದೆ. ಇದು ಸಾಧ್ಯವಾಗಬೇಕಾದರೆ 10 ವರ್ಷಗಳಲ್ಲಿ 10 ಟ್ರಿಲಿಯನ್‌ ಡಾಲರ್‌ ಹೂಡಿಕೆ ಅಗತ್ಯ’ ಎಂದು ಅವರು ತಿಳಿಸಿದರು.

‘ಮರು ಕೈಗಾರೀಕರಣಕ್ಕಾಗಿ ಜನರು ಸಹ ತೆರಿಗೆ ರೂಪದಲ್ಲಿ ಪಾವತಿ ಮಾಡಬೇಕು.ಸರಿಯಾಗಿ ತೆರಿಗೆಯನ್ನು ಸಂಗ್ರಹಿಸಿದರೆ, ತೆರಿಗೆ ರೂಪದಲ್ಲೇ 1.2 ಟ್ರಿಲಿಯ ಡಾಲರ್‌ (₹ 88 ಲಕ್ಷ ಕೋಟಿ) ಸಂಗ್ರಹಿಸಬಹುದು’ ಎಂದು ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT