ಸೋಮವಾರ, ಆಗಸ್ಟ್ 15, 2022
20 °C
ನಿಯೋಜಿತ ಅಧ್ಯಕ್ಷ ಬೈಡನ್‌ರಿಂದ ನಾಮನಿರ್ದೇಶನ

ಕರ್ನಾಟಕ ಮೂಲದ ಡಾ.ಮೂರ್ತಿ ಅಮೆರಿಕದ ‘ಸರ್ಜನ್‌ ಜನರಲ್‌’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕನ್‌ ಡಾ.ವಿವೇಕ್‌ ಮೂರ್ತಿ ಅವರನ್ನು ’ಸರ್ಜನ್‌ ಜನರಲ್‌‘ ಆಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರು ನಾಮನಿರ್ದೇಶನ ಮಾಡಿದ್ದಾರೆ.

ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಾ.ಮೂರ್ತಿ ಅವರು ಸರ್ಜನ್‌ ಜನರಲ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾದ ನಂತರ ಹಠಾತ್ತನೆ ಈ ಹುದ್ದೆಯನ್ನು ತೊರೆದರು.

ಪ್ರಸ್ತುತ ಅವರು ಕೋವಿಡ್‌–19 ಕುರಿತಂತೆ ಬೈಡನ್‌ ಅವರು ರಚಸಿರುವ ಸಲಹಾ ಮಂಡಳಿಯ ಸಹ ಚೇರ್‌ಮನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ. ಮೂರ್ತಿ ಅವರ ಪಾಲಕರು ಮಂಡ್ಯ ಜಿಲ್ಲೆಯವರು. ವೃತ್ತಿಯಿಂದ ವೈದ್ಯರಾದ ಮೂರ್ತಿ ಅವರ ತಂದೆ 1978ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದು, ಸದ್ಯ ಮಿಯಾಮಿಯಲ್ಲಿ ನೆಲೆಸಿದ್ದಾರೆ.

‘ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಡಾ.ಮೂರ್ತಿ ಅವರು ನನ್ನ ಪಾಲಿಗೆ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿ. ಸಾರ್ವಜನಿಕ ಸೇವೆಯಲ್ಲಿ ಮುಂದುವರಿಯಲಿರುವ ಅವರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಬೈಡನ್‌ ಹೇಳಿದ್ದಾರೆ.

‘ಕೋವಿಡ್‌–19 ಪಿಡುಗಿನಿಂದ ದೇಶ ತತ್ತರಿಸುವ ಈ ಸಂದರ್ಭದಲ್ಲಿ, ಈ ಪಿಡುಗಿನ ವಿರುದ್ಧ ಹೋರಾಡುವ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಹೊರುವಂತೆ ಮೂರ್ತಿ ಅವರಿಗೆ ಹೇಳಿದ್ದೇನೆ. ವೈದ್ಯವಿಜ್ಞಾನ, ಔಷಧಿಗಳಲ್ಲಿ ಜನರ ನಂಬಿಕೆಯನ್ನು ಮರುಸ್ಥಾಪನೆ ಮಾಡುವ ಜವಾಬ್ದಾರಿಯೂ ಅವರ ಮೇಲಿದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು